ಅಕ್ಟೋಬರ್ 28ರಂದು ಎಸ್‍ಸಿಡಿಸಿಸಿ ಬ್ಯಾಂಕ್ ಸೈಬರಕಟ್ಟೆ ಶಾಖೆಯ ಸ್ಥಳಾಂತರ ಹಾಗೂ ಎ.ಟಿ.ಎಂ. ಉದ್ಘಾಟನೆ

ಮಂಗಳೂರು

news-details

ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗಣನೀಯ ಪ್ರಗತಿಯನ್ನು ಕಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 110 ವರ್ಷಗಳ ಸಾರ್ಥಕ ಸೇವೆಯ ಇತಿಹಾಸವನ್ನು ಹೊಂದಿದೆ. 1914ರಲ್ಲಿ ಪುತ್ತೂರುನಲ್ಲಿ ದಿವಂಗತ ಮೊಳಹಳ್ಳಿ ಶಿವರಾವ್ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ಈ ಬ್ಯಾಂಕ್ ಪ್ರಸ್ತುತ 113 ಶಾಖೆಗಳನ್ನು ಹೊಂದಿದೆ. ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರ ಸಮರ್ಥ ಅಧ್ಯಕ್ಷತೆಯಲ್ಲಿ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುತ್ತಿರುವ ಎಸ್‍ಸಿಡಿಸಿಸಿ ಬ್ಯಾಂಕ್ ಗ್ರಾಹಕರ ಅವಶ್ಯಕತೆಗೆ ಸದಾ ಸ್ಪಂದಿಸುತ್ತಿದೆ. ಇದೀಗ ಗ್ರಾಹಕರ ಹೆಚ್ಚಿನ ಅನುಕೂಲತೆಗಾಗಿ ಬ್ರಹ್ಮಾವರ ತಾಲೂಕಿನಲ್ಲಿರುವ ಬ್ಯಾಂಕಿನ ಸೈಬರಕಟ್ಟೆ ಶಾಖೆಯನ್ನು ಈಗ ಇರುವ ಕಟ್ಟಡದಿಂದ ಶಿರಿಯಾರ ಗ್ರಾಮದ ಬ್ರಹ್ಮಾವರ-ಹಾಲಾಡಿ ಮುಖ್ಯರಸ್ತೆಯಲ್ಲಿರುವ ಸೈಬರಕಟ್ಟೆಯ “ಎಸ್. ಎಸ್. ಕಾಂಪ್ಲೆಕ್ಸ್”ಗೆ ಸ್ಥಳಾಂತರಿಸಲಾಗುವುದು. ಈ ಸ್ಥಳಾಂತರ ಸಮಾರಂಭ ಹಾಗೂ ಹೊಸ ಎ.ಟಿ.ಎಂ. ಕೇಂದ್ರದ ಉದ್ಘಾಟನೆ ದಿನಾಂಕ.  28-10-2024ರಂದು ಪೂರ್ವಾಹ್ನ 10.30 ಗಂಟೆಗೆ ನಡೆಯಲಿದೆ.

ಸದಾ “ಗ್ರಾಹಕ ಸ್ನೇಹಿ” ತತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಬ್ಯಾಂಕಿನಲ್ಲಿ ಈಗಾಗಲೇ 14 ಎ.ಟಿ.ಎಂ.ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಸಾೈಬ್ರಕಟ್ಟೆ ಶಾಖೆಯಲ್ಲಿ ಉದ್ಘಾಟನೆಗೊಳ್ಳಲಿರುವ 15ನೇ ಎ.ಟಿ.ಎಂ. ಕೇಂದ್ರದ ಉದ್ಘಾಟನೆಯನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ  ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ನೆರವೇರಿಸಲಿರುವರು.

ಸ್ಥಳಾಂತರಗೊಳ್ಳುವ ಈ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಬೆಂಗಳೂರು, ಇದರ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ದೀಪ ಪ್ರಜ್ವಲನೆ ಮಾಡಲಿರುವರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎ. ಕಿರಣ್ ಕುಮಾರ್ ಕೊಡ್ಗಿ, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ  ಶ್ರೀ ಬಿ. ಪ್ರದೀಪ್ ಬಲ್ಲಾಳ್, ಶಿರಿಯಾರ ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ಶ್ರೀ ಸುಧೀಂದ್ರ ಶೆಟ್ಟಿ ಹಾಗೂ ಕಟ್ಟಡ ಮಾಲಕರಾದ ಶ್ರೀ ಸುರೇಶ್ ಶೆಟ್ಟಿ ಬಿ. ಮತ್ತು ಶ್ರೀ ಶರತ್ ಕುಮಾರ್ ಶೆಟ್ಟಿ ಇವರು ಭಾಗವಹಿಸಲಿರುವರು.

ಗ್ರಾಹಕರಿಗೆ ಉನ್ನತ ಸೇವೆಯನ್ನು ನೀಡುವುದರೊಂದಿಗೆ ಜನಮನ್ನಣೆ ಪಡೆದಿರುವ ಈ ಶಾಖೆಯನ್ನು ಗ್ರಾಹಕರ ಅನುಕೂಲಕ್ಕಾಗಿ ಸಂಪೂರ್ಣ ಹವಾನಿಯಂತ್ರಿತಗೊಳಿಸಲಾಗಿದೆ. ಸ್ಥಳಾಂತರಗೊಳ್ಳಲಿರುವ ಈ ಶಾಖೆಯು ಸಂಪೂರ್ಣ ಗಣಕೀಕೃತಗೊಂಡು, ಏಕಗವಾಕ್ಷಿ, ಕೋರ್ ಬ್ಯಾಂಕಿಂಗ್ ಹಾಗೂ ಆರ್ಟಿಜಿಸ್  ಮತ್ತು ನೆಪ್ಟ್ ಸೌಲಭ್ಯಗಳೊಂದಿಗೆ ಕಾರ್ಯಾರಂಭಗೊಳ್ಳಲಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.

news-details