ಶ್ರೀ ಕ್ಷೇತ್ರ ನೆಲ್ಲಿತೀರ್ಥ ಸೋಮನಾಥೇಶ್ವರನ ಸನ್ನಿಧಿ: 'ಗುಹಾಪ್ರವೇಶ - ತೀರ್ಥಸ್ನಾನ' ಪ್ರಾರಂಭೋತ್ಸವದ ಉದ್ಘಾಟನೆ

ಮಂಗಳೂರು

news-details

ಬೆಳಗ್ಗೆ 9:00ಗಂಟೆಗೆ  ಸರಿಯಾಗಿ ಗುಹಾಪ್ರವೇಶ - ತೀರ್ಥಸ್ನಾನದ ಪ್ರಾರಂಭೋತ್ಸವ ಬಗ್ಗಮಜಲು ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡು,

ಮಂಗಳೂರು ಕುಳಾಯಿ  ಶ್ರೀ ಚಿತ್ರಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರ ಅಮೃತಹಸ್ತದಿಂದ  ದೀಪ ಬೆಳಗಿಸುವ ಮೂಲಕ 'ಗುಹಾ ಪ್ರವೇಶ' ಉದ್ಘಾಟನಾ ಸಮಾರಂಭವು ನೆರವೇರಿತು. ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಲಕ್ಷ್ಮಿನಾರಾಯಣ ಅಸ್ತ್ರಣ್ಣ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಯುಗಪುರುಷದ ಪ್ರಧಾನ ಸಂಪಾದಕ  ಶ್ರೀ ಭುವನಾಭಿರಾಮ ಉಡುಪ ಹಾಗೂ ಮಂಗಳೂರಿನ ಖ್ಯಾತ ಉದ್ಯಮಿ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ  ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಅನಂತ ಕೃಷ್ಣ ಅಡಿಗ ಪುತ್ತಿಗೆ, ಎಂ. ವಿ. ವೆಂಕಟರಾಜ್ ಭಟ್ ನೆಲ್ಲಿತೀರ್ಥ, ಎನ್. ವಿ. ಜಿ. ಕೆ. ಭಟ್ ನೆಲ್ಲಿತೀರ್ಥ, ಎನ್. ವಿ. ರಮೇಶ್ ಭಟ್ ನೆಲ್ಲಿತೀರ್ಥ, ಪ್ರಸನ್ನ ಭಟ್ ನೆಲ್ಲಿತೀರ್ಥ, ವಸಂತ ಭಟ್ ನೆಲ್ಲಿತೀರ್ಥ, ಗಣಪತಿ ಭಟ್ ಅರ್ಚಕರು ನೆಲ್ಲಿತೀರ್ಥ, ಆನಂದ ಕಾವ ಸಾಂತ್ರಬೈಲ್, ಕೃಷ್ಣಪ್ಪ ಪೂಜಾರಿ ನೆಲ್ಲಿತೀರ್ಥ, ಸುಂದರ ಪೂಜಾರಿ ನೆಲ್ಲಿತೀರ್ಥ, ನರೇಶ್  ಶೆಣೈ  ಮಂಗಳೂರು, ದೀಪ ಕಿರಣ್ ಸಾಲ್ಯಾನ್ ಕರಂಬಾರ್, ಹನುಮಂತ ಕಾಮತ್ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ನೆಲ್ಲಿತೀರ್ಥ ಗುಹಾಲಯವು  ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕೊಂಪದವು ಗ್ರಾಮದ ನೀರುಡೆಯಲ್ಲಿದೆ. (ಮಂಗಳೂರು ನಗರದಿಂದ 30 ಕಿಲೋಮೀಟರ್ ದೂರ).

ಈ ಗುಹಾಲಯವು ಕರ್ನಾಟಕದ ಅತಿ ದೊಡ್ಡ ಗುಹಾ ದೇವಾಲಯಗಳಲ್ಲಿ ಒಂದಾಗಿದೆ.  ಶ್ರೀ ನೆಲ್ಲಿ ತೀರ್ಥ ಸೋಮನಾಥೇಶ್ವರ ಗುಹಾಲಯವು ಬಹಳ ಪುರಾತನ ಶಿವ ದೇವಾಲಯವಾಗಿದ್ದು ಒಂದು ಸುಪ್ರಸಿದ್ಧ ಗುಹಾತೀರ್ಥಕ್ಷೇತ್ರವಾಗಿದೆ. ಇದು ಮಹಾನ್ ತಪಸ್ವಿ  ಮಹರ್ಷಿ ಜಾಬಾಲಿಗಳು ತಪಸ್ಸು ಮಾಡಿ ಭೂಮಿಗೆ ನಂದಿನಿ ನದಿಯನ್ನು ಹರಿಸಿದಂತ ಪೌರಾಣಿಕ ಸ್ಥಳ. ತಪಸ್ಸಿಗೆ ಮೆಚ್ಚಿದ ಶ್ರೀ ದುರ್ಗಾಪರಮೇಶ್ವರಿಯು ಜಾಬಾಲಿ ಋಷಿಯ ಮುಂದೆ ಪ್ರತ್ಯಕ್ಷಳಾಗಿ ಅರುಣಾಸುರನನ್ನು  ಕೊಲ್ಲುವ ಭರವಸೆಯನ್ನು ನೀಡಿ,  ನಂದಿನಿ ನದಿಯ ತೀರದಲ್ಲಿ ಭ್ರಾಮರಿ (ದುಂಬಿಯ) ಆಕಾರದಲ್ಲಿ ಉದ್ಭವಿಸಿ ಅರುಣಾಸುರನನ್ನು ಹಾಗೂ  ಇತರ ರಾಕ್ಷಸಗಣಗಳನ್ನು ಸಂಹಾರ ಮಾಡುತ್ತಾಳೆ. ಹಾಗೆಯೇ ಈ ನಂದಿನಿ ನದಿಯ ಕಟಿ ಪ್ರದೇಶದಲ್ಲಿ ದುರ್ಗಾಪರಮೇಶ್ವರಿಯಾಗಿ ನೆಲೆ ಕೊಳ್ಳುತ್ತಾಳೆ. ಈ ಸನ್ನಿಧಿಯೇ ಈಗಿನ ಪ್ರಖ್ಯಾತ ಕಟೀಲು ಕ್ಷೇತ್ರವಾಗಿ ಅತ್ಯಂತ ಪ್ರಸಿದ್ಧವಾದ ದೇವಾಲಯ ಎಂಬ ಖ್ಯಾತಿ ಪಡೆದಿದೆ. ಹಾಗಾಗಿ ನೆಲ್ಲಿತೀರ್ಥ ಮತ್ತು ಕಟೀಲು  ಕ್ಷೇತ್ರಗಳಿಗೆ ಅನೋನ್ಯ ಸಂಬಂಧವಿದೆ.

ಈ ಗುಹಾಲಯದೊಳಗೆ ನೆಲ್ಲಿ ತೀರ್ಥ ಎಂಬ ಪವಿತ್ರ ಕೊಳ ಮತ್ತು ಜಾಬಾಲೇಶ್ವರ ಎಂಬ ಶಿವಲಿಂಗವಿದೆ. ಜನರು ಗುಹೆಯನ್ನು ಪ್ರವೇಶಿಸಿ ಪವಿತ್ರ ತೀರ್ಥಸ್ನಾನ ಮಾಡಬಹುದಾಗಿದೆ. ಪ್ರತಿವರ್ಷ 'ತುಲಾ ಸಂಕ್ರಮಣ'ದ ಶುಭದಿನದಿಂದ 'ಮೇಷ ಸಂಕ್ರಮಣ' ದ  ವರೆಗೆ ಮಾತ್ರ ಈ ಗುಹೆ ಪ್ರವೇಶಿಸಲು ಮತ್ತು ತೀರ್ಥಸ್ನಾನ ಮಾಡಲು ಜನರಿಗೆ ಅವಕಾಶವಿದೆ.

ಈ ಗುಹೆಯ ಹೊರಗಿರುವ ಮುಖ್ಯ ದೇವಾಲಯ ಶ್ರೀ ಸೋಮನಾಥನ ಹಾಗೂ  ಶ್ರೀ ಮಹಾಗಣಪತಿ ದೇವರ ನಿತ್ಯ ಪೂಜೆ ಆರಾಧನೆ ಉತ್ಸವಗಳು ನಡೆಯುತ್ತದೆ. ಮಧ್ಯಾಹ್ನ ಶ್ರೀದೇವರ ಮಹಾಪೂಜೆ ಆಗುವವರೆಗೆ ಮಾತ್ರ ಗುಹಾ ಪ್ರವೇಶಕ್ಕೆ ಅವಕಾಶವಿದ್ದು ಈ ವರ್ಷ ಅಕ್ಟೋಬರ್ 17ರಂದು ಪ್ರಾರಂಭವಾಗಿ  2025ರ ಏಪ್ರಿಲ್ 14 ರಂದು ಕೊನೆಗೊಳ್ಳಲಿದೆ.

ಹೆಚ್ಚಿನ ಮಾಹಿತಿಗೆ : 0824-2299142 / ಮೊ. 9980889381 ಸಂಪರ್ಕಿಸಬಹುದು.

news-details