ರೈಲ್ವೇ ಹಳಿಯಲ್ಲಿ ಕಲ್ಲಿಟ್ಟ ಆಗಂತುಕರು ಸ್ಥಳೀಯ ಮನೆಗಳಲ್ಲಿ ಕಂಪನದ ಅನುಭವ

ಮಂಗಳೂರು

news-details

<p>ತೊಕ್ಕೊಟ್ಟು ಸಮೀಪ&nbsp;&nbsp;ರೈಲ್ವೇ ಹಳಿಯ ಎರಡೂ ಬದಿಗಳಲ್ಲಿ ಆಗಂತುಕರಿಬ್ಬರು ಜಲ್ಲಿಕಲ್ಲುಗಳನ್ನಿಟ್ಟ ಪರಿಣಾಮ &nbsp;ಎರಡು ರೈಲುಗಳು ಚಲಿಸುವ ಸಂದರ್ಭ ದೊಡ್ಡ ಸದ್ದು ಸ್ಥಳೀಯರಿಗೆ ಕೇಳಿಬಂದಿದ್ದು, ಸ್ಥಳೀಯರು ರೈಲ್ವೇ ಹಳಿಯತ್ತ ದೌಡಾಯಿಸಿದ್ದಾರೆ.&nbsp;<br />
ತಡರಾತ್ರಿ&nbsp; 8.05ರ ಸುಮಾರಿಗೆ ಕೊರಗಜ್ಜನ ಅಗೆಲು ಮುಗಿಸಿ ವಾಪಸ್ಸಾಗುತ್ತಿದ್ದ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿವಾಸಿ ಮಹಿಳೆಯರು ಹಳಿಯಲ್ಲಿ ಇಬ್ಬರು ಆಗಂತುಕರನ್ನು ಕಂಡಿದ್ದರು. ಅಲ್ಲಿಂದ ಮನೆಗೆ ತಲುಪುವಷ್ಟರಲ್ಲಿ &nbsp;ರೈಲೊಂದು ಕೇರಳ ಕಡೆಗೆ ತೆರಳಿತ್ತು. ಈ ವೇಳೆ ದೊಡ್ಡ ಸದ್ದು ಆವರಿಸಿತ್ತು. &nbsp;ಅದನ್ನು ಸ್ಥಳೀಯರು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಳಿಕ ಇನ್ನೊಂದು ರೈಲು ಚಲಿಸುವಾಗ ಮತ್ತೊಮ್ಮೆ ದೊಡ್ಡ ಸದ್ದು ಆವರಿಸಿತ್ತು. ಪರಿಣಾಮ ಸ್ಥಳೀಯ ಕೆಲವು ಮನೆಗಳಲ್ಲಿಯೂ ಕಂಪನವುಂಟಾಗಿತ್ತು. ತಕ್ಷಣವೇ ರೈಲು ಅಪಘಾತವೆಂದು ಭಾವಿಸಿ ಹಳಿಯತ್ತ ದೌಡಾಯಿಸಿದಾಗ &nbsp;ಹಳಿ ಮೇಲಿರಿಸಲಾದ ಜಲ್ಲಿಕಲ್ಲುಗಳು ತುಂಡಾಗಿರುವುದು ಅಲ್ಪಸ್ವಲ್ಪ ಕಂಡುಬಂದಿದೆ.</p>

<p>&nbsp; &nbsp; &nbsp;40ವರ್ಷಗಳಿಂದ ತೊಕ್ಕೊಟ್ಟು ಪರಿಸರದಲ್ಲಿ ನೆಲೆಸಿದ್ದೇವೆ. ಆದರೆ ರೈಲು ದಾಟುವಾಗ ಕಂಪನದ ಅನುಭವ ಇದೇ ಮೊದಲ ಬಾರಿಗೆ ಆಗಿದೆ ಅನ್ನುವ ಅಭಿಪ್ರಾಯವನ್ನು ಸ್ಥಳೀಯ ಮಹಿಳೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ರೈಲ್ವೇ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. &nbsp;ಓವರ್ ಬ್ರಿಡ್ಜ್ ಕೆಳಗಡೆ ನಿತ್ಯ &nbsp;ಅಪರಿಚಿತರು ಬಂದು ಕುಳಿತು ಪಾನಮತ್ತರಾಗಿ ತೆರಳುತ್ತಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲವು ದೂರುಗಳೇ ಇವೆ. ಇದೀಗ ಸಂಭಾವ್ಯ ಅನಾಹುತ ತಪ್ಪಿದೆ. ಮುಂದೊಂದು ದಿನ ಅಪಾಯ ನಡೆಯುವ ಮುನ್ನ ಎಚ್ಚೆತ್ತು, ಸಂಬಂಧಪಟ್ಟ ಇಲಾಖೆ ಸಿಸಿಟಿವಿ ಅಳವಡಿಸಬೇಕು ಅನ್ನುವ ಆಗ್ರಹ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.&nbsp;</p>

news-details