<p>ನ. 2ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈ ಅವರ ನೇತೃತ್ವದ ರೈಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ನಡೆಯುವ ಅಶೋಕ ಜನ-ಮನ ಕಾರ್ಯಕ್ರಮಕ್ಕೆ ಗ್ರಾಮದ ಪ್ರತೀಯೊಬ್ಬರೂ ಬಂದು ನಮ್ಮ ಆಶೀರ್ವಾದ ಮಾಡಬೇಕು ನಿಮ್ಮ ಆಗಮನವೇ ನಮಗೆ ದೊಡ್ಡ ಆಶೀರ್ವಾದ ಎಂದು ಟ್ರಸ್ಟ್‌ನ ಪ್ರಮುಖರಾದ ನಿಹಾಲ್ ಪಿ ಶೆಟ್ಟಿ ಹೇಳಿದರು.</p>
<p>ಅವರು ಕುರಿಯ ಗ್ರಾಮದಲ್ಲಿ ನಡೆದ ಅಶೋಕ ಜನ ಮನ ಕಾರ್ಯಕ್ರಮದ ಪ್ರಚಾರ ಸಭೆ ಹಾಗೂ ಆಹ್ವಾನ ಸಮಾರಂಭದಲ್ಲಿ ಮಾತನಾಡಿದರು.</p>
<p>ಕಳೆದ ಹತ್ತು ವರ್ಷಗಳಿಗಿಂದ ಶಾಸಕರಾದ ಅಶೋಕ್ ರೈ ಅವರು ಪ್ರತೀ ವರ್ಷ ದೀಪಾವಳಿಯಂದು ವಸ್ತ್ರ ವಿತರಣೆ ಹಾಗೂ ಸಹಭೋಜನ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದಾರೆ. ಈ ಬಾರಿ ಸುಮಾರು 75ಸಾವಿರಕ್ಕೂ ಮಿಕ್ಕಿ ಮಂದಿಗೆ ವಸ್ತ್ರದಾನ ಮಾಡುತ್ತಿದ್ದಾರೆ ಈ ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರು , ಮಕ್ಕಳು ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.</p>
<p>ಶಿವರಾಮ ಆಳ್ವ ಮಾತನಾಡಿ ಶಾಸಕರ ನೇತೃತ್ವದಲ್ಲಿ ನಡೆಯುವ ಜನ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಆಹ್ವಾನ ಪತ್ರವನ್ನು ಹಂಚಲಾಯಿತು. ಈ ಸಂದರ್ಬದಲ್ಲಿ ಸನತ್ ರೈ ಕುರಿಯ, ಗ್ರಾಪಂ ಸದಸ್ಯ ಯಾಕೂಬ್ ಕುರಿಯ, ಶಿವನಾಥ ರೈ ಮೇಗಿನಗುತ್ತು, ಗ್ರಾಪಂ ಸದಸ್ಯರಾದ ನೇಮಾಕ್ಷ ಸುವರ್ಣ ಮಗಿರೆ ಸೇರಿದಂತೆ ಗ್ರಾಮಸ್ಥರು ಹಾಗೂ ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.</p>