SKPA ಮಂಗಳೂರು ವಲಯ ಇದರ ಸಹಯೋಗದೊಂದಿಗೆ ಫ್ಯೂಜಿಫಿಲ್ಮ್ ಆರ್ಟ್ ಆಫ್ ಸಿನಿಮಾಟೋಗ್ರಫಿ ಎಂಬ ನೂತನ ಕ್ಯಾಮರಾ ಬಿಡುಗಡೆ ಮತ್ತು ಕಾರ್ಯಗಾರ ಮಂಗಳೂರಿನ ಹೋಟೆಲ್ ಓಷಿಯನ್ ಪರ್ಲ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಖ್ಯಾತ ಸಿನಿಮಾಟೋಗ್ರಾಫರ್ ಮತ್ತು ಯುಟ್ಯೂಬರ್ ಫಿಕ್ಸೆಲ್ ವಿಲೇಜ್ ನ ಶ್ರೀ ರಾಧಾಕೃಷ್ಣ ಚಾಖ್ಯಾತ್ ರವರು ಕಾರ್ಯಗಾರ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ SKPA ಮಂಗಳೂರು ವಲಯದ ಅಧ್ಯಕ್ಷರಾದ ಹರೀಶ್ ಅಡ್ಯಾರ್, ಫ್ಯೂಜಿಫಿಲ್ಮ್ ನ ಏರಿಯಾ ಸೇಲ್ಸ್ ಮ್ಯಾನೇಜರ್ ಶ್ರೀ ನ್ಯಾಯಾಜ್ ಪಾಶ, ಟೆಕ್ನಿಕಲ್ ಎಕ್ಸ್ಪರ್ಟ್ ಶ್ರೀ ಸತ್ಯ ಬಿ.,

ಖ್ಯಾತ ಛಾಯಾಗ್ರಾಹಕರಾದ ಶ್ರೀ ವಿವೇಕ್ ಸಿಕ್ವೆರ, ಮಹಾವೀರ ಸ್ಟುಡಿಯೋ ಮತ್ತು ಕೆಮರಾ ಸೇಲ್ಸ್ ನ ಮಾಲೀಕರಾದ ಶ್ರೀ ಸುಧಾಕರ್ ಶೆಣೈ, SKPA ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ರಮೇಶ್ ಕಲಾಶ್ರೀ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್ ಉಪಸ್ಥಿತರಿದ್ದರು.

ಈ ಕಾರ್ಯಗಾರದಲ್ಲಿ ಭಾಗವಹಿಸಿದ SKPA ಮಂಗಳೂರು ವಲಯದ ಸದಸ್ಯರು ಹೆಚ್ಚಿನ ಸದುಪಯೋಗ ಪಡೆದುಕೊಂಡರು.