<p>ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಳದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಫಾತಿಮತ್ ಮಿಶಾಲ್ ಗುಂಡೆಸೆತ ದ್ವಿತೀಯ ಸ್ಥಾನ, ಪ್ರೌಢಶಾಲಾ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅದ್ನ 200m ನಲ್ಲಿ ತೃತೀಯ ಸ್ಥಾನ. ಬಾಲಕರ ವಿಭಾಗದಲ್ಲಿ ಧನ್ವಿತ್ ಶೆಟ್ಟಿ ಗುಂಡೆಸೆತ ಪ್ರಥಮ ಸ್ಥಾನ, ಆರ್ಯನ್‌ ಪಿ. ಚಕ್ರ ಎಸೆತ ತೃತೀಯ ಸ್ಥಾನ ಹಾಗೂ ಪ್ರೌಢಶಾಲಾ 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅನಘ ಪಿ. 200 ಮೀ ಹಾಗೂ 400ಮೀ ಓಟ ಪ್ರಥಮ, 800 ಮೀಟರ್ ದ್ವಿತೀಯ ಸ್ಥಾನ, ಸೃಷ್ಟಿ ಎಸ್. ರೈ ಉದ್ದ ಜಿಗಿತ ಪ್ರಥಮ, ತ್ರಿವಿಧ ಜಿಗಿತ ದ್ವಿತೀಯ,ಹಾಗೆಯೇ 4×100ಮೀ ರಿಲೇ ಸ್ಪರ್ಧೆಯಲ್ಲಿ ಅನಘ ಪಿ, ಸೃಷ್ಟಿ ಎಸ್ ರೈ, ಲಹರಿ,ವೀಕ್ಷಾ ಎ. ತೃತೀಯ ಸ್ಥಾನ ಪಡೆದಿರುತ್ತಾರೆ. ಬಾಲಕರ ವಿಭಾಗದಲ್ಲಿ ಸಾತ್ವಿಕ್ ಎಂ. ಸಿ. ಚಕ್ರ ಎಸೆತ ಪ್ರಥಮ ಹಾಗೂ ಗುಂಡೆಸೆತ ತೃತೀಯ, ಹಾರ್ದಿಕ್ ಉದ್ದ ಜಿಗಿತ ದ್ವಿತೀಯ, ಅನುದೀಪ್ 1500 ಮೀ ತೃತೀಯ ಸ್ಥಾನ,ಮನುದೀಪ್ 100 ಮೀ ತೃತೀಯ ಸ್ಥಾನ ಪಡೆದಿರುತ್ತಾರೆ. ಪ್ರೌಢಶಾಲಾ 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅನಘ ಪಿ. ವೈಯುಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದಿರುತ್ತಾರೆ. ಈ ಎಲ್ಲ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.</p>