ನೆಲ್ಯಾಡಿ ಸಂತ ಅಲ್ಫೋನ್ಸ ಸಭಾಂಗಣದಲ್ಲಿ ಕೊನೆಗೊಂಡ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಹದಿನೈದು ವರ್ಷದೊಳಗಿನ ಬಾಲಕ ಬಾಲಕಿಯರ ಕಿರಿಯ ಕುಸುಮ ಮಿಷನ್ ಲೀಗ್ ಇದರ ದ್ವೈವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆ ಗಳಲ್ಲಿ ನೆಲ್ಯಾಡಿ ಅಲ್ಫೋನ್ಸ ಪುಣ್ಯ ಕ್ಷೇತ್ರದ ಪುಟಾಣಿ ಗಳು ಗುಂಪು ವಿಭಾಗದ

ಸ್ಕಿಟ್ ನಲ್ಲಿ ಪ್ರಥಮ,ಸಮೂಹ ಗಾಯನ ದಲ್ಲಿ ಪ್ರಥಮ, ವ್ಯಕ್ತಿಗತ ವಿಭಾಗದಲ್ಲಿ ನೃತ್ಯ ಪ್ರಥಮ, ಸೋಲೋ ಗಾಯನದಲ್ಲಿ ಪ್ರಥಮ, ಬೈಬಲ್ ವಾಚನ ದಲ್ಲಿ ಪ್ರಥಮ, ಭಾಷಣ ದಲ್ಲಿ ಪ್ರಥಮ, ವಚನ ಮಾಲೆ ಯಲ್ಲಿ ಪ್ರಥಮ ಹೀಗೆ ಒಟ್ಟು ಮೂವತ್ತಯಿದು ಅಂಕಗಳೊಂದಿಗೆ ಗ್ರೂಪ್ ಚಾòಪಿಯನ್ಸ್ ಆಗಿ ಹೊರ ಹೊಮ್ಮಿತು.ಸಂತ ಮೇರಿಸ್ ಆರ್ಲ ದ್ವಿತೀಯ ಸ್ಥಾನ ಪಡೆಯಿತು.

ಕಾರ್ಯಕ್ರಮದಲ್ಲಿ ಉದನೆ ಸೆಂಟ್ ತೋಮಸ್ ಫೋರೆನ್ ಚರ್ಚ್ ನ ಧರ್ಮ ಗುರುಗಳಾದ ವಂದನಿಯ ಫಾ ಸಿಬಿ ತೋಮಸ್ ಪನಚಿಕ್ಕಲ್, ಫಾ. ಜೋಸೆಫ್ ಪೂದಕ್ಕುಯಿ, ಶಿರಾಡಿ ಶ್ರಿ ರೊಯ್ ನೆಲ್ಯಾಡಿ, ಮುಖ್ಯ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದರು.

ಫಾ. ಜೋಸೆಫ್ ಪುದುಕ್ಕುಯಿ, ರಾಯ್ ಶಿರಾಡಿ, ಟೋಮಿ ಮಟ್ಟಯಿ ಉಪಸ್ಥಿತರಿದ್ದರು.

ನೆಲ್ಯಾಡಿ ಅಲ್ಪೊನ್ಸ ಚರ್ಚ್ ನ ಧರ್ಮ ಗುರುಗಳಾದ ಶಾಜಿ ಮ್ಯಾಥ್ಯ ವಿಜೇತರನ್ನು ಅಭಿನಂದಿಸಿದರು.