<p>ಭಾರತೀಯ ಪರಂಪರೆಯಂತೆ ದೇವಾಲಯ ನಿರ್ಮಾಣದ ಪ್ರಮುಖ ಘಟ್ಟ ದೇವಾಲಯದ ಗರ್ಭಗುಡಿಯ ಪಾದುಕಾನ್ಯಾಸ ಅದರಂತೆ ಜೀರ್ಣದ್ದಾರ ಗೊಳ್ಳುತ್ತಿರುವ ದೊಂತಿಲ ಶ್ರೀ ಮಹಾವಿಷ್ಣು ಸುಬ್ರಮಣ್ಯಶ್ವರ ದೇವಸ್ಥಾನದ ಗರ್ಭಗುಡಿಯ ಪಾದುಕಾನ್ಯಾಸ ಕಾರ್ಯಕ್ರಮ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ದಿನಾಂಕ 24/10/2024 ರ ಗುರುವಾರದಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ ಸಹಿತ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿ ಗಳ ನೇತೃತ್ವದಲ್ಲಿ ನಡೆಯಿತು. ವಾಸ್ತು ತಜ್ಞ ಮುನಿಯಂಗಳ ಕೃಷ್ಣ ಪ್ರಸಾದ್, ಕಾರ್ಕಳ ಶಿಲ್ಪಿ ಗುಣವಂತೇಶ್ವರ ಭಟ್, ಅರ್ಚಕರಾದ ಶ್ರೀ ಅನಂತ ಪದ್ಮನಾಭ, ಶ್ರೀ ಧರ ನೂಜಿನ್ನಾಯ, ಮುಕ್ತೇಸರ ಸುಬ್ರಮಣ್ಯ ಬಾಳ್ತಿಲ್ಲಾಯ, ಜೀರ್ಣೋದ್ಧಾರ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ದೇವಸ್ಥಾನ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಗ್ರಾಮಸ್ಥರು ಪಾಲ್ಗೊಂಡರು.</p>