ರಾಷ್ಟ್ರಮಟ್ಟದಲ್ಲಿ ಮಿಂಚಿದ ಗ್ರಾಮೀಣ ಪ್ರದೇಶದ ಕುವರಿ

ಪುತ್ತೂರು

news-details

<p>ಅಕ್ಟೋಬರ್ 24ರಂದು ಮಧ್ಯಪ್ರದೇಶದ ಸರಸ್ವತಿ ವಿದ್ಯಾಪೀಠದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಕ್ರೀಡಾಕೂಟದ 600 ಮೀಟರ್ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗೆದ್ದ ಕ್ರೀಡಾಪಟು ಪುತ್ತೂರು ತಾಲೂಕು  ಬೆಟ್ಟಪಾಂಡಿ  ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಧನ್ವಿ.ಎ.ಎಂ ಈಕೆ ಪುತ್ತೂರು ತಾಲೂಕು ಹೊಸನಗರದ ಆಲಂತಡ್ಕ ನಿವಾಸಿ ಮೋಹನಚಂದ್ರ ಹಾಗೂ ಉಷಾ ದಂಪತಿಗಳ ಸುಪುತ್ರಿ. ಪ್ರಿಯದರ್ಶಿನಿ ವಿದ್ಯಾ ಸಂಸ್ಥೆಯ ಶ್ರೀಮತಿ ಮಮತಾ ಇವರಿಗೆ  ತರಬೇತು ನೀಡಿರುತ್ತಾರೆ. ಗ್ರಾಮೀಣ ಪ್ರದೇಶದ ವಿದ್ಯಾಸಂಸ್ಥೆ ಪ್ರಿಯದರ್ಶಿನಿಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಲು ಕಾರಣಳಾದ ಧನ್ವಿ ಇವಳನ್ನು ಮುಖ್ಯ ಗುರುಗಳು, ಶಾಲಾ ಆಡಳಿತ ಮಂಡಳಿ, ಅಧ್ಯಾಪಕವೃಂದ  ಪ್ರಶಂಸಿಸಿರುತ್ತಾರೆ.</p>

news-details