ಧರ್ಮಸ್ಥಳದ ಮೇಳದ ಚೆಂಡೆ ವಾದಕರಿಗೆ ಮನೆ ಹಸ್ತಾಂತರ

ಪುತ್ತೂರು

news-details

<p>ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ &nbsp;ಪಟ್ಲ &nbsp;ಸತೀಶ್ ನವರ ಕನಸಿನ ಪಟ್ಲ ಯಕ್ಷಾಶ್ರಯ ಯೋಜನೆಯ 31ನೇ ಮನೆಯ ಕೀಲಿಕೈಯನ್ನು ಫಲಾನುಭವಿಗಳಾದ ಶ್ರೀ ಧರ್ಮಸ್ಥಳದ &nbsp;ಮೇಳದ ಚೆಂಡೆ ವಾದಕರಾದ &nbsp;ಚಂದ್ರಶೇಖರವರಿಗೆ ಹಸ್ತಾಂತರಿಸಲಾಯಿತು.&nbsp;<br />
ಕೊಡುಗೈ ದಾನಿಗಳಾದ ಖ್ಯಾತ ಉದ್ಯಮಿ &nbsp;ರಘುನಾಥ ಸೋಮಯಾಜಿಯವರ ಕೊಡುಗೆಯ ಈ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಕಲಾಪೋಷಕರಾದ &nbsp;ಆರ್. ಕೆ. ಭಟ್ ಬೆಂಗಳೂರು, ಟ್ರಸ್ಟಿನ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ &nbsp;ಕೆ.ಭಂಡಾರಿ, ಟ್ರಸ್ಟಿನ ಸರಪಾಡಿ ಘಟಕದ ಸಂಚಾಲಕರಾದ ಸರಪಾಡಿ ಅಶೋಕ್ ಶೆಟ್ಟಿ, ಬಂಟ್ವಾಳ ಘಟಕದ ಅಧ್ಯಕ್ಷರಾದ &nbsp;ಚಂದ್ರಹಾಸ ಶೆಟ್ಟಿ ರಂಗೋಲಿ, ಗೌರವಾಧ್ಯಕ್ಷರಾದ ಶ್ರೀ ಜಗನ್ನಾಥ ಚೌಟ, &nbsp;ಶ್ರೀಕಾಂತ್ ಅರಳ ಇನ್ನಿತರರು ಭಾಗವಹಿಸಿದರು. ಸರಪಾಡಿ ಘಟಕದ ಕಾರ್ಯದರ್ಶಿಗಳಾದ &nbsp;ಧನಂಜಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.</p>

news-details