ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ, ಗ್ರಾಮ ಪಂಚಾಯತ್ ಬಡಗನ್ನೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಸಹಕಾರದೊಂದಿಗೆ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಶ್ರೀ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಪೋಷಕತ್ವದಲ್ಲಿ, ಬಡಗನ್ನೂರು ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಸರಣಿ-17 ಕಾರ್ಯಕ್ರಮವು

ಬಡಗನ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ ಚಾಲನೆ ನೀಡಿದರು.

ಸರ್ವಾಧ್ಯಕ್ಷತೆಯನ್ನು ಸ. ಉ. ಹಿ. ಪ್ರಾ ಶಾಲೆ ಬಡಗನ್ನೂರು ಇಲ್ಲಿನ ವಿದ್ಯಾರ್ಥಿನಿ ಕು.ವಿಸ್ಮಿತಾ. ಎಂ ವಹಿಸಿದರು.

ನಿವೃತ್ತ ಮುಖ್ಯ ಶಿಕ್ಷಕರಾದ ರಾಮಣ್ಣ ಗೌಡ ರವರು ಸಾಧಕರಾದ ,

ಕೆ ಸಿ ಪಾಟಾಳಿ, ಮಹಮ್ಮದ್ ಬಡಗನ್ನೂರು, ಡಾ. ರವೀಶ್ ಪಡುಮಲೆ, ಡಾ.ಹರಿಪ್ರಸಾದ್, ಶಂಕರಿ ಪಟ್ಟೆ , ವಿಶ್ವನಾಥ ಪೂಜಾರಿ ಪೂಜಾರಿಮೂಲೆ , ನಯನ ವಿ ರೈ ಕುಡ್ಕಾಡಿ, ಶ್ರೀಶಾವಾಸವಿ ತುಳುನಾಡ್ ರವರಿಗೆ ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ, ಕಡಮಜಲು ಸುಭಾಷ್ ರೈ ಅಧ್ಯಕ್ಷತೆ ವಹಿಸಿದ್ದರು. ಬಡಗನ್ನೂರು ಪಂಚಾಯತ್ ಉಪಾಧ್ಯಕ್ಷೆ ಸುಶೀಲಾ, ಪಿಡಿಒ ಮೋನಪ್ಪ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ವಿಜಯ ಲಕ್ಷೀ, ಬಡಗನ್ನೂರು ಸರಕಾರಿ ಶಾಲೆಯ ಹರಿಣಾಕ್ಷಿ

ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ನಾರಾಯಣ ಕುಂಬ್ರ ಉಪಸ್ಥಿತರಿದ್ದರು.