<p>ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪಾಣಾಜೆ, ತುಳುನಾಡು ಫ್ರೆಂಡ್ಸ್ ತೂಂಬಡ್ಕ, ಓಂ ಫ್ರೆಂಡ್ಸ್ ಭರಣ್ಯ ಮತ್ತು ಗ್ರಾಮಸ್ಥರ ನೆರವಿನಿಂದ ರಣಮಂಗಲ ದೇವಸ್ಥಾನ ಹಾಗೂ ಪಾಣಾಜೆ ಗ್ರಾಮದ 3 ಮತ್ತು 4ನೇ ವಾರ್ಡಿನ ಪ್ರಧಾನ ಸಂಪರ್ಕ ರಸ್ತೆಯ ಹೊಂಡಗಳಲ್ಲು ಶ್ರಮದಾನದ ಮೂಲಕ ಕಲ್ಲು ಮತ್ತು ಮಣ್ಣು ಹಾಕಿ ಮುಚ್ಚಿ ದುರಸ್ತಿಗೊಳಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು. ಟ್ರಸ್ಟ್ ನ ಅಧ್ಯಕ್ಷ ರಮೇಶ್ ಭಟ್ ಬೊಲ್ಲುಕಲ್ಲು, ಪ್ರವೀಣ್ ರೈ ಕೋಟೆ ಉಪಹಾರ ಮತ್ತು ತಂಪು ಪಾನೀಯದ ವ್ಯವಸ್ಥೆ ಮಾಡಿದರು.</p>