<p>ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ಎಂಬಲ್ಲಿ ಸುಮಾರು 9.30 ಗಂಟೆಗೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಲಿ ಬುಲೆಟ್ ಟ್ಯಾಂಕರ್ ,ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನೀರಕಟ್ಟೆ ಎಂಬಲ್ಲಿ ಮಗುಚಿ ಬಿದ್ದು ಅಪಘಾತ ಸಂಭವಿಸಿದೆ .</p>
<p>ರಾಷ್ಟ್ರೀಯ ಹೆದ್ದಾರಿ ಆದ್ದರಿಂದ ವಾಹನಗಳ ಸಂಖ್ಯೆ ಹೆಚ್ಚಿರುವ ಕಾರಣ, ಉಳಿದ ವಾಹನಗಳಿಗೆ ಸಂಚಾರಕ್ಕೆ ಅಡಚಣೆ ಆಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.<br />
ಈ ಅಪಘಾತದ ಬಗ್ಗೆ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.</p>
<p>ಉಪ್ಪಿನಂಗಡಿ ಪೊಲೀಸ್ಸಿಬ್ಬಂದಿಗಳಾದ ಸತೀಶ್ ,ರಾಮಣ್ಣ ,ವಾಹನ ಸಂಚಾರ ಸುಗಮಗೊಳಿಸಲು ಸಹಕರಿಸಿದರು.</p>