ಕೇರಳ ಕರ್ನಾಟಕದ ಗಡಿ ಭಾಗವಾದ ಪಡುವನ್ನೂರು ಗ್ರಾಮದ ಸುಳ್ಯಪದವು ಯುವಶಕ್ತಿ ಕಲಾ ಮತ್ತು ಕ್ರೀಡಾಬಳಗ (ರಿ.) ಇದರ ನೇತೃತ್ವದಲ್ಲಿ 4ನೇ ವರ್ಷದ 'ಯುವಶಕ್ತಿ ಉತ್ಸವ 2024'ವು ಸರ್ವೋದಯ ಕ್ರೀಡಾಂಗಣದಲ್ಲಿ ನವಂಬರ್ 1ರಂದು ಶುಕ್ರವಾರ ನಡೆಯಲಿದೆ.
ಬೆಳಿಗ್ಗೆ ಗಂಟೆ 9.45ಕ್ಕೆ ಸುಳ್ಯಪದವು ಶ್ರೀ ಬಾಲಸುಬ್ರಹ್ಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ಶ್ರೀಮತಿ ಪ್ರೇಮಾ ಎನ್. ಕಲ್ಲೂರಾಯ ಇವರು ಯುವಶಕ್ತಿ ಉತ್ಸವ 2024 ಇದಕ್ಕೆ ಚಾಲನೆ ನೀಡಲಿದ್ದಾರೆ.
ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ ಗೌರವಾಧ್ಯಕ್ಷ ಶ್ರೀ ವಿನಯ ಬೋಳುಗುಡ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಪುತ್ತೂರು ಶಾಸಕ ಶ್ರೀ ಅಶೋಕ್ ಕುಮಾರ್ ರೈ, ಸರ್ವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಶ್ರೀ ಎಚ್. ಡಿ. ಶಿವರಾಂ, ರಾಜ್ಯ ಪ್ರಶಸ್ತಿ ಪುರಸ್ಕೃತ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ದಯಾನಂದ ರೈ ಕೋರ್ಮoಡ, ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ ದೇವಕಜೆ, ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ ಹಿರಿಯ ಸದಸ್ಯರಾದ ಶ್ರೀ ಅಣ್ಣುಮೂಲ್ಯ ಸುಳ್ಯಪದವು ಭಾಗವಹಿಸಲಿದ್ದಾರೆ.
ಗುರುವಂದನಾ ಕಾರ್ಯಕ್ರಮ:
ಸುಳ್ಯ ಪದವು ಸರ್ವೋದಯ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಸತ್ಯ ಶಂಕರ್ ಭಟ್ ಇವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.
ಸನ್ಮಾನ ಕಾರ್ಯಕ್ರಮ:
ನಿವೃತ್ತ ಪೊಲೀಸ್ ಸೂಪರಿಂಟೆoಡೆಂಟ್ ಬೆಂಗಳೂರು ಶ್ರೀ ಭಾಸ್ಕರ ವಿ ಬಿ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಪ್ರತಿಭಾ ಪುರಸ್ಕಾರ :
ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ ಕುಮಾರಿ ಅಮೃತ ಕೆ. ಕಾಯರ್ ಪದವು ಕುಮಾರಿ ದೃಶ್ಯ ಕೆ.ವಿ. ಕನ್ನಡ್ಕ ಮತ್ತು 2023 -24 ನೇ ಸಾಲಿನ ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ತೇರ್ಗಡೆಯಾದ ಸರ್ವೋದಯ ಪ್ರೌಢಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
ಪೂರ್ವಾಹ್ನ ಗಂಟೆ 10:30ಕ್ಕೆ ಪಡುವನ್ನೂರು, ಬಡಗನ್ನೂರು, ನೆಟ್ಟಣಿಗೆ ಮುಡ್ನೂರು, ಬೆಳ್ಳೂರು ಗ್ರಾಮ ಪಂಚಾಯತಿಗೆ ಒಳಪಟ್ಟ ಅಂಗನವಾಡಿ ಮಕ್ಕಳಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಅಪರಾಹ್ನ 3 ಗಂಟೆಯಿಂದ
ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ಹಾಗೂ ಆಟೊಟ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದೆ.
ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ (ರಿ.) ಸುಳ್ಯಪದವು ಇದರ ಅಧ್ಯಕ್ಷ ಶ್ರೀ ಗುರುಕಿರಣ್ ರೈ ಎನ್.ಜಿ ಅಧ್ಯಕ್ಷತೆಯಲ್ಲಿ ಪುತ್ತೂರು ಶ್ರೀ ಮಾತಾ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾದ ಶ್ರೀ ದಾಮೋದರ್ ಕುಲಾಲ್ ಇವರು ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ.
ಪಂಜ ಉಪವಲಯ ಅರಣ್ಯಾಧಿಕಾರಿಗಳಾದ ಶ್ರೀ ಸಂತೋಷ ರೈ ಸಬ್ರುಕಜೆ ಬಹುಮಾನ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು Anthem ಬಯೋ ಸೈನ್ಸ್ ಪ್ರೈವೇಟ್ ltd ಮ್ಯಾನೇಜರ್ ಉದಯಶಂಕರ್ ಗುತ್ಯಡ್ಕ, ಸುಳ್ಯಪದವು ಸರ್ವೋದಯ ವಿದ್ಯಾ ಸಂಸ್ಥೆಗಳ ಸಂಚಾಲಕ ಶ್ರೀ ಮಹಾದೇವ ಭಟ್ ಕೊಲ್ಯ, ಸರ್ವೋದಯ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಶ್ರೀ ಸುಖೇಶ್ ರೈ, ರಾಷ್ಟ್ರೀಯ ವಾಲಿಬಾಲ್ ಆಟಗಾರ ಶ್ರೀ ಗಣೇಶ ರೈ ಮುಂಡಾಸು (BSNL), ಯುಶಕ್ತಿ ಕಲಾ ಮತ್ತು ಕ್ರೀಡಾ ಬಳಗದ ಉಪಾಧ್ಯಕ್ಷ ಶ್ರೀ ರೂಪೇಶ್ ಮರದಮೂಲೆ, ಹಿರಿಯ ಸದಸ್ಯ ಶ್ರೀ ಶ್ರೀಧರ ಕಾಯರ್ ಪದವು ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಮ್ಯಾಟ್ ಮಾದರಿಯ ಮಹಿಳೆಯರ ಕಬಡ್ಡಿ ಪಂದ್ಯಾಟ ನಡೆಯಲಿದೆ.ಸಂಜೆ ಗಂಟೆ 4.00ರಿಂದ ಹೊನಲು ಬೆಳಕಿನ ಮ್ಯಾಟ್ ಮಾದರಿಯ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿದೆ. ದೀಪಾವಳಿ ಪ್ರಯುಕ್ತ ರಾತ್ರಿ 8:30ಕ್ಕೆ ಸಿಡಿಮದ್ದು ಪ್ರದರ್ಶನ. ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ ಗೌರವ ಸಲಹೆಗಾರ ಶ್ರೀ ಸತೀಶ್ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಮಂಗಳೂರು ಶ್ರೀ ಕಟೀಲು ಲಾಜಿಸ್ಟಿಕ್ಸ್ ಶ್ರೀ ಜನಾರ್ಧನ ಪೂಜಾರಿ ಪದಡ್ಕ ಬಹುಮಾನ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ಶ್ರೀ ವೆಂಕಟೇಶ್ವರ ಪವರ್ ಸಲ್ಯೂಷನ್ ನ ಶ್ರೀ ಸತ್ಯಾನಂದ ಎನ್ ನಿಡಿಯಡ್ಕ, ಮಂಗಳೂರು ಸಾಯಿ ನೆರವು ಟ್ರಸ್ಟ್ ರಿಜಿಸ್ಟರ್ ಅಧ್ಯಕ್ಷ ಶ್ರೀ ಕಿಶೋರ್ ಮಂಚಿ, ಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀ ಶ್ರೀಧರ್ ಎಂ, ಸುಳ್ಯಪದವು ಶ್ರೀ ಮಂಜುನಾಥ ರೋಡ್ ಲೈನ್ಸ್ ಮಾಲಕ ಶ್ರೀ ರವಿಶಂಕರ್ ಯಾದವ್, ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ ಕಾರ್ಯದರ್ಶಿ ಶ್ರೀ ರಾಜೇಶ್ ಎಸ್,ಕೋಶಾಧಿಕಾರಿ ಹ್ಯಾರಿಸ್ ಸುಳ್ಯಪದವು ಭಾಗವಹಿಸಲಿದ್ದಾರೆ ಎಂದು ಸುಳ್ಯ ಪದವು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ ಪ್ರಕಟನೆ ತಿಳಿಸಿದೆ.
'ನ್ಯೂಸ್ ಟೈಮ್ ಕನ್ನಡ ಸುದ್ಧಿವಾಹಿನಿ'ಯಲ್ಲಿ ನೇರಪ್ರಸಾರ:
ಹೊನಲು ಬೆಳಕಿನ ಮ್ಯಾಟ್ ಮಾದರಿಯ ಮುಕ್ತ ಕಬಡ್ಡಿ ಪಂದ್ಯಾಕೂಟವು 'ನ್ಯೂಸ್ ಟೈಮ್ ಕನ್ನಡ' ಸುದ್ಧಿವಾಹಿನಿಯಲ್ಲಿ
ನೇರಪ್ರಸಾರಗೊಳ್ಳಲಿದೆ. 'ಯುವಶಕ್ತಿ ಉತ್ಸವ 2024'ರ ಕಾರ್ಯಕ್ರಮದ ಕ್ಷಣ ಕ್ಷಣದ ಎಲ್ಲಾ ಮಾಹಿತಿಗಳು 'www.newstimekannnada.com' ವೆಬ್ ಸೈಟ್ ನಲ್ಲಿ ಸಿಗಲ್ಲಿದೆ.