ಸುಳ್ಯ ಪದವು ಯುವಶಕ್ತಿ ಕಲಾ ಮತ್ತು ಕ್ರೀಡಾಬಳಗ (ರಿ.) ಇದರ ನೇತೃತ್ವದಲ್ಲಿ 4ನೇ ವರ್ಷದ ಯುವಶಕ್ತಿ ಉತ್ಸವ 2024 ವು ಸರ್ವೋದಯ ಕ್ರೀಡಾಂಗಣದಲ್ಲಿ
ಸುಳ್ಯಪದವು ಶ್ರೀ ಬಾಲ ಸುಬ್ರಹ್ಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಯ ನಿವೃತ್ತ ಮುಖ್ಯಶಿಕ್ಷಕಿ ಪ್ರೇಮಾ ಎನ್ ಕಲ್ಲೂರಾಯ ಇವರು ಯುವಶಕ್ತಿ ಉತ್ಸವ 2024 ಚಾಲನೆ ನೀಡಿ ಮಾತನಾಡಿ ಯುವ ಶಕ್ತಿ ಕ್ಲಬ್ ಹಲವು ಸಮಾಜಮುಖಿ ಕಾರ್ಯ ಜೊತೆ ಊರಿನ ವಿವಿಧ ಕ್ಷೇತ್ರ ದಲ್ಲಿ ಸಾಧನೆ ಗೈದವರನ್ನು ಗುರುತಿಸುವ ಕಾರ್ಯ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ.ಯುವ ಶಕ್ತಿಯ ಸಂಘಟನೆಯ ಕಾರ್ಯ ಸಮಾಜಕ್ಕೆ ಮಾದರಿ ಯಾಗಿದೆ ಎಂದು ಹೇಳಿದರು.
ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ ಗೌರವಾಧ್ಯಕ್ಷ ಶ್ರೀ ವಿನಯ ಬೋಳುಗುಡ್ಡೆ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಸರ್ವೋದಯ ವಿದ್ಯಾ ಸಂಸ್ಥೆಯ ಸಂಚಾಲಕರಾದ ಮಹಾದೇವ ಭಟ್ ಕೊಲ್ಯ ಯುವ ಶಕ್ತಿಯು ಉರಿನ ಆಶಯಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಯಾಗಿದೆ ಎಂದು ಹೇಳಿದರು.
ಪಡುಮಲೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ಮಾತನಾಡಿ ಯುವಶಕ್ತಿಯ ಉತ್ಸಾಹ, ಸಂಘಟನೆ ನೋಡಿದಾಗ ಮುಂದಿನ ಜನಾಂಗ ಮಾದರಿ ಯಾಗಿದೆ ಎಂದು ಹೇಳಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮoಡ ಮಾತನಾಡಿ ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ. ಕ್ಲಬ್ಬಿನ ಅಧ್ಯಕ್ಷ ಗುರುಕಿರಣ್ ರೈ ಯುವಶಕ್ತಿ ಗೆ ಶಕ್ತಿ ತುಂಬಿದ್ದಾರೆ. ಮಾದರಿ ಯಾಗಿ ಸಂಘಟನೆ ಯಾಗಿ ಬೆಳೆದಿದೆ ಎಂದು ಹೇಳಿದರು.
ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಮಾತನಾಡಿ ಯುವಶಕ್ತಿ ಕಾರ್ಯ ಶ್ಲಾಘ ನಿಯ ಎಂದು ಹೇಳಿದರು
ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ ಹಿರಿಯ ಸದಸ್ಯರಾದ ಶ್ರೀ ಅಣ್ಣುಮೂಲ್ಯ ಸುಳ್ಯ ಪದವು ಉಪಸ್ಥಿತರಿದ್ದರು.
ಸರ್ವೋದಯ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸತ್ಯ ಶಂಕರ್ ಭಟ್ ಇವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು.
ನಿವೃತ್ತ ಮುಖ್ಯ ಶಿಕ್ಷಕ ಸತ್ಯ ಶಂಕರ್ ಭಟ್ ಸನ್ಮಾನ ಸ್ವೀಕರಿಸಿ ಮಾತನಾಡಿ ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ. ಸಂಸ್ಕಾರ ವನ್ನು ಬೆಳೆಸಿಕೊಂಡು ಯುವ ಶಕ್ತಿ ಸಂಘ ಶಾಲೆಯ ಬಗ್ಗೆ ಪ್ರೀತಿ ಇಟ್ಟು ನಿಸ್ವಾರ್ಥ ಸೇವೆ ಮಾಡಿದೆ.ಕನಸು ಗುರಿ ಇಟ್ಟು ಯುವ ಶಕ್ತಿ
ಉತ್ಸವವು ಮಹೋತ್ಸವವಾಗಲಿ ಎಂದು ಶುಭ ಹಾರೈಸಿದರು.
ಸನ್ಮಾನ ಕಾರ್ಯಕ್ರಮ
ಬೆಂಗಳೂರು ನಿವೃತ್ತ ಪೊಲೀಸ್ ಸೂಪರಿಂಡೆಂಟ್ ಭಾಸ್ಕರ್ ವಿ. ಬಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಶ್ರೀ ಭಾಸ್ಕರ್ ವಿ. ಬಿ ಸನ್ಮಾನ ಸ್ವೀಕರಿಸಿ ಮಾತನಾಡಿ ಬಾಲ್ಯದಲ್ಲಿ ಶಿಕ್ಷಣ ನೀಡಿದ ಶಾಲೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಶಿಕ್ಷಕರ ಸತ್ವ ನನಗೆ ಇಷ್ಟು ಎತ್ತರ ಬೆಳೆಯಲು ಸಾಧ್ಯವಾಗಿದೆ. ಬದುಕೇ ಸಾಧನಾ ವಾಗಬೇಕು.
ಹಿರಿಯರ ಮಾರ್ಗ ದರ್ಶನ ಪಡೆದು ಸಾಧಿಸಲು ಪ್ರಯತ್ನಿಸಬೇಕು ಎಂದು ಹೇಳಿದರು
ಕ್ರೀಡಾ ಪ್ರತಿಭೆಗಳಾದ ಅಮೃತಾ ಮತ್ತು ದೃಶ್ಯ ಕೆ ವಿ ಯವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಅತಿಥಿಗಳು ಗೌರವಿಸಿದರು.
ರಮಾಕಾಂತಿ, ಸತೀಶ್ ಬಟ್ಟಾಂಗಳ, ಸುಂದರ್ ಕನ್ನಡ್ಕ, ಅನಿಲ್ ಕುಮಾರ್ ಕನ್ನಡ್ಕ, ರಾಜೇಶ್ ಎಂ, ರೂಪೇಶ್, ಮಾಧವ ನಾಯಕ್, ಶ್ರೀಧರ್, ರಾಜೇಶ್ ಎಸ್ ಇವರು ಅತಿಥಿಗಳನ್ನುಶಾಲು ಹಾಕಿ ಗೌರವಿಸಿದರು. ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ (ರಿ.) ಸುಳ್ಯಪದವು ಇದರ ಅಧ್ಯಕ್ಷ ಗುರುಕಿರಣ್ ರೈ ಎನ್.ಜಿ ಸ್ವಾಗತಿಸಿದರು.ಸದಸ್ಯ ರಾಜೇಶ್ ಎಂ ವಂದಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಯ ಶಿಕ್ಷಕ ಚಂದ್ರ ಶೇಖರ ಕಾರ್ಯಕ್ರಮ ನಿರೂಪಿಸಿದರು.