ಮಂಗಳೂರು, ಶ್ರೀ ಸಂಸ್ಥಾನ ಗೋಕರ್ಣ ನಾಥ ಪರ್ತಗಾಳಿ ಜೀವೋತ್ತಮ ಮಠ ಗೋವಾದ ಪರಮಪೂಜ್ಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದ ಒಡೇರಾ ಸ್ವಾಮೀಜಿ ಮಂಗಳೂರಿಗೆ ಆಗಮಿಸಿದ್ದು,ರಥಬೀದಿ ಸ್ವದೇಶಿ ಸ್ಟೋರ್ ಬಳಿ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಜಕರು ಸೇರಿದ್ದರು. ಗೋಕರ್ಣ ಮಠದ ಆಡಳಿತ ಮಂಡಳಿ ಸಮಿತಿಯವರು ಪಾದ ಪೂಜೆ ನೆರವೇರಿಸಿದರು. ಬಳಿಕ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ನವೆಂಬರ್ 17 ರಂದು ಶ್ರೀ ಗೋಕರ್ಣ ಮಠದಲ್ಲಿ ಶ್ರೀ ರಾಮ ನಾಮ ಜಪ ಅಭಿಯಾನ ನಡೆಯಲಿದೆ. ನವೆಂಬರ್ 21 ರ ವರೆಗೆ ಸ್ವಾಮೀಜಿ ಅವರು ಶ್ರೀ ಗೋಕರ್ಣ ಮಠ ದಲ್ಲಿ ಮೊಕ್ಕಾ0 ಇರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.