ಗಡಿಭಾಗದ ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಪುತ್ತೂರು

news-details

2024ನೇ ಸಾಲಿನ‌ ದ.ಕನ್ನಡ ಜಿಲ್ಲಾ ರಾಜ್ಯೋತ್ಸವ ದ ಶುಭಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಆರ್ಲಪದವು, ಪಾಣಾಜೆ ಆಯ್ಕೆಯಾಗಿದ್ದು ನವಂಬರ್ 1ರಂದು ಮಂಗಳೂರು ನೆಹರೂ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಹಾಗೂ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ಟ್ರಸ್ಟ್‌ ನ ಸಂಚಾಲಕರಾದ ಶ್ರೀಪ್ರಸಾದ್ ಪಾಣಾಜೆ ಪ್ರಶಸ್ತಿ ಸ್ವೀಕರಿಸಿದರು.ಈ ಮೊದಲು ಟ್ರಸ್ಟ್ ಗೆ ದ.ಕ.ಜಿಲ್ಲಾ ಅರಣ್ಯ ಮಿತ್ರ ಪ್ರಶಸ್ತಿ ಹಾಗೂ ಗಡಿನಾಡ ಧ್ವನಿ ರಾಜ್ಯ ಪ್ರಶಸ್ತಿ ಲಭಿಸಿರುತ್ತದೆ.
ಸಂದರ್ಭದಲ್ಲಿ ಟ್ರಸ್ಟ್ ನ‌ ಅಧ್ಯಕ್ಷರಾದ ಚಂದ್ರ ಎ.ಬಿ. ಪ್ರ ಕಾರ್ಯದರ್ಶಿ ಪ್ರಕಾಶ್ ಕುಲಾಲ್,ಸದಸ್ಯರಾದ ಹರಪ್ರಸಾದ್ ಕುಲಾಲ್,ರಾಧಾಕೃಷ್ಣ ಯಾದವ್ ಉಪಸ್ಥಿತರಿದ್ದರು.

news-details