ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ ಯಲ್ಲಿ ಸಾಮೂಹಿಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಸ್ಕಾರ ಪರಿವೀಕ್ಷಕರಾದ ಭಗಿನಿ ಮೀನಾಕ್ಷಿ ಮಾತಾಜಿಯವರು ಆಗಮಿಸಿದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀಯುತ ಮೂಲ ಚಂದ್ರ ಕಾಂಚನ ಹಾಗೂ ಶಾಲಾ ಮುಖ್ಯ ಗುರುಗಳಾದ ಶ್ರೀಯುತ ಗಣೇಶ್ ವಾಗ್ಲೆ ಯವರು ಉಪಸ್ಥಿತರಿದ್ದರು. ಆಚರಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಹಣೆಗೆ ತಿಲಕ ಹಾಗೂ ಸಿಹಿಯನ್ನು ನೀಡಿ ಹುಟ್ಟು ಹಬ್ಬದ ಶುಭಾಶಯವನ್ನು ತಿಳಿಸಿದರು.
ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಮಾರಿ ದಿವ್ಯಶ್ರೀ ಸ್ವಾಗತಿಸಿ, ಕುಮಾರಿ ಮಾನ್ಯ ಶ್ರೀ ಧನ್ಯವಾದ ಗೈದು, ಅಕ್ಷತಾ ಕಾರ್ಯಕ್ರಮವನ್ನು ನಿರೂಪಿಸಿದರು.