ನೆಲ್ಯಾಡಿ ಹೊಸವಕ್ಲು ಕುಟುಂಬ ಮಿಲನ, ದೀಪಾವಳಿ ಸಂಭ್ರಮ

ಪುತ್ತೂರು

news-details

ಸುಮಾರು 50 ವರ್ಷಗಳಿಂದ ಅಣ್ಣ ತಮ್ಮಂದಿರು ಒಟ್ಟಾಗಿ ಆಚರಿಸುತ್ತ ಬಂದಿರುವ ದೀಪಾವಳಿ ಹಬ್ಬವನ್ನು ಕುಟುಂಬದ ಹಿರಿಯರಾದ ಸುಂದರಿ ಹೊಸವಕ್ಲು ರವರ ಮನೆಯಲ್ಲಿ ಆಚರಿಸಲಾಯಿತು. ಕಳೆದ ಹಲವು ವರ್ಷಗಳಿಂದ ನೆಲ್ಯಾಡಿಯ ಹೊಸವಕ್ಲು ಕುಟುಂಬ ಎಲ್ಲರನ್ನು ಒಟ್ಟು ಸೇರಿಸಿ ದೀಪಾವಳಿ ಆಚರಿಸುತ್ತಿದೆ ಅದರಂತೆ ಈ ಬಾರಿಯು ಕುಟುಂಬದ ಹಿರಿಯರೊಂದಿಗೆ ಆರು ಮನೆಗಳಲ್ಲಿ ಗೋ ಪೂಜೆ ನಡೆಸಿ ಗೋ ಮಾತೆಯ ಆಶೀರ್ವಾದ ಪಡೆದು ನಂತರ ಬಲಿಯೇಂದ್ರ ಪೂಜೆ ನಡೆಸಿ ಗುರುಹಿರಿಯರಿಗೆ ವಂದಿಸಿ ಮಾತೃ ಭೋಜನ ದೊಂದಿಗೆ ಆಚರಿಸಿದರು

ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಸುಂದರಿ ಹೊಸವಕ್ಲು, ಮುತ್ತಪ್ಪ ಗೌಡ, ಚಂದ್ರಾವತಿ, ವಾಸುದೇವ ಗೌಡ ಧನಂಜಯ ಗೌಡ, ಮತ್ತು ರವಿಚಂದ್ರ, ಸುಪ್ರಿತಾ,ಸದಾನಂದ, ಭಾರತಿ, ಪ್ರಸನ್ನ, ಭಾರತಿ, ನಿವೇದಿತಾ,ಹರೀಣಾಕ್ಷಿ,ಅನುರಾಧ,ಸುಮನಾ ಮೊದಲಾದವರಿದ್ದರು

news-details