ಬೆಟ್ಟಂಪಾಡಿ ದೇವಾಲಯದ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಪುತ್ತೂರು

news-details

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಸೀಮೆಯ ಮೊದಲ ಜಾತ್ರೆಯಾಗಿದ್ದು ಅದರ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮ ನ.8 ರಂದು ನಡೆಯಿತು.
ವರ್ಷದ ಜಾತ್ರೆಯಲ್ಲಿ ಮೊದಲ ಜಾತ್ರೋತ್ಸವ ನಡೆಯುವ ಬೆಟ್ಟಂಪಾಡಿ ಜಾತ್ರೆಯು ನ.14 ರಿಂದ 17 ರವರೆಗೆ ನಡೆಯಲಿದೆ.
ದೇವಾಲಯದ ಪ್ರಧಾನ ಅರ್ಚಕ ವೆ.ಮೂ.ವೆಂಕಟ್ರಮಣ ಭಟ್ ಬೆಳಿಗ್ಗೆ ದೇವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿ ನಂತರ ಗೊನೆ ಕಡಿಯಲಾಯಿತು.
ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಬೀಡು, ಮೊಕ್ತೇಸರ ವಿನೋದ್ ರೈ ಗುತ್ತು, ಶಿವಕುಮಾರ್ ಬಲ್ಲಾಳ್, ಅರ್ಚಕ ನಾರಾಯಣ ಭಟ್, ಸಹಾಯಕ ಪ್ರಸನ್ನ ಭಟ್, ಕ್ಲರ್ಕ್ ವಿನಯ ಕುಮಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

news-details