ಶ್ರೀ ವರಮಹಾಲಕ್ಷ್ಮಿ ಮಾತೃ ಭಜನಾ ಮಂಡಳಿ ನೆಲ್ಯಾಡಿ ಕುಣಿತ ಭಜನಾ ತರಬೇತಿ ಕಾರ್ಯಗಾರ

ಪುತ್ತೂರು

news-details

ಶ್ರೀ ವರಮಹಾಲಕ್ಷ್ಮಿ ಮಾತೃ ಭಜನಾ ಮಂಡಳಿ ನೆಲ್ಯಾಡಿ, ಇವರ ಕುಣಿತ ಭಜನಾ ತರಬೇತಿ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮವು ಕೃಷ್ಣ ಸೌರಭ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕಡಬ ತಾಲೂಕಿನ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷರಾದ ಸುಂದರ ಗೌಡ ಬಿಳಿನೆಲೆ, ನೆರವೇರಿಸಿದರು. ಸಹ ತರಬೇತುದರಾದ ಮೋಹನ್ ಆಚಾರ್ಯ ಹಾಗೂ ಶ್ರೀರಾಮ ವಿದ್ಯಾಲಯದ ಮಾಜಿ ಅಧ್ಯಕ್ಷರಾದ ರವಿಚಂದ್ರ ಹೊಸ ವಕ್ಲು, ಪ್ರಾಸ್ತಾವಿಕ ಮತ್ತು ಸ್ವಾಗತವನ್ನು ಮಾಡಿದರು. ವೇದಿಕೆಯಲ್ಲಿ ಶ್ರೀ ವರಮಹಾಲಕ್ಷ್ಮಿ ಮಾತೃ ಭಜನಾ ಮಂಡಳಿ ಅಧ್ಯಕ್ಷರಾದ ಸುಪ್ರೀತಾ ರವಿಚಂದ್ರ ಉಪಸ್ಥಿತರಿದ್ದರು,. ಮಂಡಳಿಯ ಸದಸ್ಯರಾದ, ಬೇಬಿ ಸದಾನಂದ, ಕುಸುಮ, ನಮಿತಾ ಶೆಟ್ಟಿ, ಪುಷ್ಪಾವತಿ, ಜಯಂತಿ, ಲಲಿತಾ, ಸುಮಲತಾ, ವಿಮಲಾ, ಪ್ರಿಯಾ, ಪ್ರಿಯಾಂಕ, ಚಂದ್ರಿಕಾ, ಗೀತಾ, ಸೂರ್ಯ, ಹರಿಣಾಕ್ಷಿ, ಸೌಮ್ಯ, ಹೇಮಲತಾ ಶೆಟ್ಟಿ, ಭಾರತಿ, ಪ್ರತಿಭಾ, ಭವಿಷ್ಯ, ಸರಿತಾ ಕುಮಾರಿ, ಸದಸ್ಯರು ಉಪಸ್ಥಿತರಿದ್ದರು. ಸದಸ್ಯರಾದ ನಮಿತಾ ಶೆಟ್ಟಿ ಧನ್ಯವಾದ ಸಮರ್ಪಿಸಿ .ಕಾರ್ಯದರ್ಶಿ ಸುಮಾ ಸುಂದರ್ ನಿರೂಪಿಪಿಸಿದರು.

news-details