ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.), ಕಾವು ಮಾಡ್ನೂರು ಗ್ರಾಮ ಸಮಿತಿ, ದೇರಳಕಟ್ಟೆ ನಿಟ್ಟೆ ಜಸ್ಟಿಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ , ಯೇನಪೋಯ ಕಾಲೇಜ್ ಮತ್ತು ಆಸ್ಪತ್ರೆ ದೇರಳಕಟ್ಟೆ, ಶ್ರೀ ಸತ್ಯಸಾಯಿ ಸೇವಾ ಸಮಿತಿ ಈಶ್ವರಂಬ ಟ್ರಸ್ಟ್ ರಿಜಿಸ್ಟರ್ ಮಂಗಳೂರು ಇದರ ಸಂಯುಕ್ತ ದಲ್ಲಿ ಉಚಿತ ವೈದ್ಯಕೀಯ ದಂತ ಹಾಗೂ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ವು ಕಾವು ಜನಮಂಗಲ ಸಭಾಭವನದಲ್ಲಿ ಭಾನುವಾರ ನಡೆಯಿತು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಇವರು ದೀಪಬೆಳಗಿಸಿ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿದರು.
ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.)ನ ಅಧ್ಯಕ್ಷ ಮಹೇಂದ್ರ ವರ್ಮಾ ವಳಾಲು ಅಧ್ಯಕ್ಷತೆ ವಹಿಸಿದರು.
ಕಾವು ಸರಯು ಕ್ಲಿನಿಕ್ ನ ವೈದ್ಯರಾದ
Dr ನವೀನ್ ಶಂಕರ, ಕುಂಬ್ರ ಮಾತೃಶ್ರೀ ಅರ್ಥ್ ಮೂವರ್ಸ್ ನ ಮೋಹನ್ ದಾಸ್ ರೈ, ಪುತ್ತಿಲ ಪರಿವಾರದ ಕಾರ್ಯದರ್ಶಿ ರವಿಕುಮಾರ್ ರೈ
ಕೆದಂಬಾಡಿ, ಕಾವು ಗೋ ಪೂಜಾ ಸಮಿತಿ ಅಧ್ಯಕ್ಷ ನಹುಶ ಭಟ್, ಅಯೋಧ್ಯ ಕರ ಸೇವಕ ನಾರಾಯಣ ಆಚಾರ್ಯ ಮಳಿ, ಕಾವು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ
ರವಿ ಚಂದ್ರ ಮಾಣಿಯಡ್ಕ, ಕಾವು ಪುತ್ತಿಲ ಪರಿವಾರದ ಅಧ್ಯಕ್ಷ ಹರೀಶ್ ಕುಂಜತ್ತಾಯ, ಸತ್ಯ ಸಾಯಿ ಸೇವಾ ಸಮಿತಿಯ ನಿರಂಜನ್ ಹೆಬ್ಬಾರ್, ತಾಲೂಕು ಸಮಿತಿ ಅಧ್ಯಕ್ಷ ಪ್ರಸನ್ನ ಭಟ್, ನಿಟ್ಟೆ ಆಸ್ಪತ್ರೆಯ ಡಾ.ಅನೀಸ್, ಡಾ.ತಿಲಕ್,ಯೇನಪೋಯ ಆಸ್ಪತ್ರೆಯ ಡಾ.ಮಮತಾ ಪ್ರಭಾಕರ್, ನ್ಯಾಯವಾದಿ ಚಂದ್ರಹಾಸ್ ಮುಂಡ್ಯ ಈಶ್ವರ ಮಂಗಲ ಉಪಸ್ಥಿತರಿದ್ದರು.ಬೆಳಿಗ್ಗೆನಿಂದ ಮಧ್ಯಾಹ್ನದವರೆಗೆ ಸುಮಾರು 200ಕ್ಕಿಂತ ಮಿಕ್ಕಿ ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.
ಟ್ರಸ್ಟಿನ ಸದಸ್ಯ ಸುನಿಲ್ ಬೋರ್ಕರ್ ಸ್ವಾಗತಿಸಿದರು. ಕಾವು ಘಟಕದ ಸದಸ್ಯ ಚಿದಾನಂದ ಆಚಾರ್ಯ ವಂದಿಸಿದರು. ಚಂದ್ರಕಿರಣ ಕಾವು ಕಾರ್ಯಕ್ರಮ ನಿರ್ವಹಿಸಿದರು.