ಡಾ. ಶಿವರಾಮ ಕಾರಂತ ಜನ್ಮದಿನಾಚರಣೆ ಅಂಗವಾಗಿ ಕೋಟ ತಟ್ಟು ಗ್ರಾಮ ಪಂಚಾಯತ್ ಮತ್ತು ಶಿವರಾಮ ಕಾರಂತ ಪ್ರತಿಷ್ಠಾನದ ವತಿಯಿಂದ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯತ್ಗಳಿಗೆ ನೀಡಲಾಗುವ 2024ನೇ ಸಾಲಿನ ಡಾ. ಶಿವರಾಮ ಕಾರಂತ ಪ್ರಶಸ್ತಿಯನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಶಿರಾಡಿ ಗ್ರಾಮ ಪಂಚಾಯತ್ ಮಾಡಿದ ಸಾಧನೆಗಾಗಿ ಪಡೆದುಕೊಂಡಿದೆ.
ಶಿರಾಡಿ ಗ್ರಾಮ ಪಂಚಾಯತಿನಲ್ಲಿ 664 ಮಂದಿ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಣಿ ಮಾಡಿದ್ದು. 2023-24ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯತ್ನಲ್ಲಿ 140 ಕಾಮಗಾರಿಗಳು ನಡೆದಿವೆ. 72,41,479 ರೂಪಾಯಿಗಳು ವ್ಯಯವಾಗಿದ್ದು. ಇದರಲ್ಲಿ 53.08 ಲಕ್ಷ ರೂ ಗಳ ಕೂಲಿ ಹಾಗೂ 18.68ಲಕ್ಷ ರೂ ಗಳನ್ನು ಸಾಮಗ್ರಿ ಪಾವತಿಸಲಾಗಿದೆ. ಒಟ್ಟಿನಲ್ಲಿ 16,797 ಮಾನವ ದಿನಗಳ ಸೃಜನೆಯಾಗಿದೆ. ಈ ಮೂಲಕ ಹಲವು ಕಾಮಗಾರಿಗಳು ನಡೆದಿವೆ. ಗ್ರಾಮ ಪಂಚಾಯತ್ ನ ಈ ಗಮನಾರ್ಹ ಸಾಧನೆ ಗಾಗಿ ಈ ಪ್ರಶಸ್ತಿ ದೊರೆತ್ತಿದೆ. ಪ್ರಶಸ್ತಿಯನ್ನು ಇಂದು ಉಡುಪಿಯ ಕೋಟಾತಟ್ಟು ಗ್ರಾಮ ಪಂಚಾಯತ್ ಸಭಾಂಗಣ ದಲ್ಲಿ ಮೇಘಾಲಯ ರಾಜ್ಯಪಾಲರಿಂದ ಶಿರಾಡಿ ಗ್ರಾಮ ಪಂಚಾಯ್ತ್ ಅಧ್ಯಕ್ಷರಾದ ಕಾರ್ತಿಕೆಯನ್ ಮತ್ತು ಗ್ರಾಮ ಪಂಚಾಯತ್ ಸದಸ್ಯರುಗಳು, ಪಿ ಡಿ ಓ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗ ಸ್ವೀಕರಿಸಿದರು.