ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷ ವಿದ್ಯಾಶ್ರೀ ಅಧ್ಯಕ್ಷತೆಯಲ್ಲಿ ನಡೆಯಿತು.
ಕುಡಿಯುವ ನೀರಿನ ಬಿಲ್ ನ್ನು ಫ ಲಾನುಭವಿ ಕಟ್ಟದೇ ಇರುವುದರಿಂದ ಗ್ರಾಮ ಅಭಿವೃದ್ಧಿ ಗೆ ತೊಡಕಾಗಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು. ವಾರ್ಡ್ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಭೆ ಕರೆಯಬೇಕು, ಕುಡಿಯುವ ನೀರಿನ ಬಿಲ್ ಪಾವತಿಸದವರ ಮನೆಗೆ ಅಧಿಕಾರಿಗಳು ಜನಪ್ರತಿನಿದಿನಗಳು ಗಳು ಸೇರಿ ಭೇಟಿ ನೀಡಿ ಮನೆಯ ವರಿಗೆ ಮನವರಿಕೆ ಮಾಡಿದರೆ ಉತ್ತಮ ಎಂದು ಉಪಾಧ್ಯಕ್ಷ ಮಹೇಶ್ ಸಲಹೆ ನೀಡಿದರು. ನಂತರ ಚರ್ಚೆ ನಡೆದು ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಭೆ ಗೆ ದಿನಾಂಕ ನಿಗದಿ ಪಡಿಸಲಾಯಿತು.
ನ. 25 ನರೇಗಾ ಗ್ರಾಮ ಸಭೆ ನಡೆಸುವುದೆಂದು ಸಭೆ ನಿರ್ಣಯ ಕೈ ಗೊಳ್ಳಲಾಯಿತು.
ಉಪಾಧ್ಯಕ್ಷ ಮಹೇಶ್.ಕೆ, ಸದಸ್ಯರಾದ ನವೀನ್ ರೈ, ಗಂಗಾಧರ ಗೌಡ, ಮೊಯಿದು ಕುಂಞ, ಮಹಾಲಿಂಗ ನಾಯ್ಕ,ಸುಮಲತಾ, ಲಲಿತಾ ಚಿದಾನಂದ, ರಮ್ಯ.ಕೆ, ಲಲಿತಾ,ಚಂದ್ರಶೇಖರ ರೈ, ಪಾರ್ವತಿ.ಎಂ,ಪವಿತ್ರ.ಡಿ, ಬೇಬಿ,ಉಮಾವತಿ, ಪ್ರಕಾಶ್ ರೈ,ಗೋಪಾಲ.ಬಿ ಉಪಸ್ಥಿತರಿದ್ದರು.
ಪಿಡಿಒ ಸೌಮ್ಯ, ಸ್ವಾಗತಿಸಿದರು. ಕಾರ್ಯದರ್ಶಿ ಬಾಬು ನಾಯ್ಕ ವಂದಿಸಿದರು.