ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮೂಡ್ನೂರು ಎಂ. ಆರ್. ಪಿ .ಎಲ್, . (ಸಿ ಎಸ್ ಆರ್ )ಅನುದಾನದಡಿ 30 ಲಕ್ಷ ರೂಪಾಯಿಯ ಎರಡು ತರಗತಿ ಕೊಠಡಿ ಮತ್ತು ಶೌಚಾಲಯಕ್ಕೆ ಶಿಲಾನ್ಯಾಸ

ಪುತ್ತೂರು

news-details

ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಇಲ್ಲಿಗೆ ಎಂ ಆರ್ ಪಿ ಎಲ್ (ಸಿ ಎಸ್ ಆರ್ )ಅನುದಾನದಲ್ಲಿ ಎರಡು ತರಗತಿ ಕೊಠಡಿಗಳು ಮತ್ತು ಶೌಚಾಲಯದ ಶಿಲಾನ್ಯಾಸವನ್ನು ಶಾಸಕರಾದ ಶ್ರೀಅಶೋಕ್ ಕುಮಾರ್ ರೈ ನೆರವೇರಿಸಿ ಮಾತನಾಡಿ ಈ ಸರಕಾರಿ ಪ್ರೌಢಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಖಂಡಿತ ಮಾಡುತ್ತೇನೆ ಆ ಮೂಲಕ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಕನಸನ್ನು ನನಸಾಗಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಫೌಝಿಯಾ ಇಬ್ರಾಹಿಂ . ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಇದರ ಕಾರ್ಯಾಧ್ಯಕ್ಷರಾದ ಶ್ರೀರಾಮ್ ಪಕ್ಕ ಳ. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಮ ಮೇನಾಲ. ಗ್ರಾಮ ಪಂಚಾಯತಿ ಸದಸ್ಯರಾದ ಇಬ್ರಾಹಿಂ ಪಳ್ಳತ್ತೂರು. ವೆಂಕಪ್ಪ ನಾಯ್ಕ ಮೇನಾಲ. ಶ್ರೀಮತಿ ಇಂದಿರಾ. ಶ್ರೀಮತಿ ಪ್ರಪುಲ್ಲಾ ರೈ ಮುಖಂಡರಾದ ಎನ್ ಮೂಸನ್. ಶಿಕ್ಷಣ ತಜ್ಞರಾದ ಸದಾಶಿವ ರೈ ನಡುಬೈಲು. ಖಾದರ್ ಕರ್ನೂರು. ಕರ್ನೂರು ಪ್ರಾಥಮಿಕ ಶಾಲಾ ಸ್‌ಡಿಎಂಸಿ ಅಧ್ಯಕ್ಷರಾದ. ಸೂಫಿ ಬಾಂಟ್ಟಡ್ಕ. ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಸಮಿತಿಯ ಸದಸ್ಯರಾದ ವಿಕ್ರಂ ರೈ ಮೂಲೆ. ಮಹಮ್ಮದ್ ಪಳ್ಳತ್ತೂರು. ಕೆ ಎಂ ಸಾಂತ್ಯ. ಅಬ್ದುಲ್ ಖಾದರ್ ಸುರುಳಿಮೊಹಮ್ಮದ್ ಮೇನಾಲ. ಅಶ್ರಫ್ ಕತಾರ್. ಕಟ್ಟಡ ಗುತ್ತಿಗೆದಾರ ಅಜೀಜ್ ಓಣಿಯಡ್ಕ.. ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್. ಕಾರ್ಯನಿರ್ವಹಣಾಧಿಕಾರಿಗಳಾದ ನವೀನ್ ಭಂಡಾರಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಪ್ರೇಮ್ ಕುಮಾರ್ ಸ್ವಾಗತಿಸಿದರು. ಶಿಕ್ಷಕರಾದ ಶ್ರೀಪುರುಷೋತ್ತಮ ಶ್ರೀಮತಿ ಇಂದಿರಾ.
ಶ್ರೀಮತಿ ರಮಿತಾ. ಹಾಗೂ ಅತಿಥಿ ಶಿಕ್ಷಕರಾದ ಶ್ರೀಮತಿ ಮೀನಾಕ್ಷಿ. ಶ್ರೀಮತಿ ದಮಯಂತಿ, ಶ್ರೀಮತಿ ಮೋನಿಷಾ.
ಹಾಗೂ ಕಚೇರಿ ಸಿಬ್ಬಂದಿಯಾದ ಶ್ರೀಮತಿ ಹೇಮಾವತಿ ಸಹಕರಿಸಿದರು. ಶ್ರೀ ಮಹಾಬಲ ರೈ ಕರ್ನೂರು ವಿಶ್ರಾಂತ ಮುಖ್ಯ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು..

news-details