ಮಕ್ಕಳ ಗಮನ ಸೆಳೆದ ಸಾಲುಮರಗಳ ತಿಮ್ಮಕ್ಕ!

ಮಂಗಳೂರು

news-details

ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದಾಕೆ. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿದ ಮತ್ತು ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದ ಸಾಲು ಮರಗಳ ತಿಮ್ಮಕ್ಕಳಂತೆ ವೇಷಧರಿಯಾದ ಯು. ಕೆ. ಜಿ. ಪುಟಾಣಿ ಲೌಕ್ಯ ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದಾಳೆ.

ಸಾಲುಮರಗಳ ತಿಮ್ಮಕ್ಕಳಂತೆ ವೇಷ ಭೂಷಣಗಳನ್ನು ಧರಿಸಿ, ಹಿನ್ನೆಲೆಯ ಧ್ವನಿಗೆ ಅಭಿನಯಿಸಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಮಕ್ಕಳ ಗಮನ ಸೆಳೆದಿದ್ದಾಳೆ. ಈ ಮೂಲಕ ಮರ ಗಿಡಗಳ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾಳೆ.
ಮಕ್ಕಳ ದಿನಾಚರಣೆಯನ್ನು ಪ್ರತಿ ವರ್ಷ ನವೆಂಬರ್ 14ರಂದು ಆಚರಿಸಲಾಗುತ್ತದೆ. ಭಾರತದ ಮೊದಲ ಪ್ರಧಾನ ಮಂತ್ರಿ ಪಂ. ಜವಾಹರ್ ಲಾಲ್ ನೆಹರು ಅವರ ಈ ದಿನದಂದು, ಶಾಲೆಗಳಲ್ಲಿ ಮಗುವಿನ ರೋಮಾಂಚಕ ಮನೋಭಾವ ಮತ್ತು ಸಾಮರ್ಥ್ಯ ಗುರುತಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.
ಮಂಗಳೂರಿನ ತಾಲ್ಲೂಕಿನ ನೀರುಮಾರ್ಗದ ಕೆಲರೈಯ ಸೇಂಟ್ ಆನ್ನೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಆಲಂಕಾರಿಕ ಉಡುಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು, ಇದರಲ್ಲಿ ಶಾಲೆಯ 100ಕ್ಕೂ ಹೆಚ್ಚಿನ ಮಕ್ಕಳು ಭಾಗವಹಿಸಿ ಸಂಭ್ರಮದಿಂದ ಮಕ್ಕಳ ದಿನಾಚರಣೆಯನ್ನು ಆಚರಿಸಿದರು.

ಮಕ್ಕಳು ವೈದ್ಯ, ರೈತ, ಸೈನಿಕ, ಸ್ವಾತಂತ್ರ್ಯಾ ಹೋರಾಟಗಾರರ, ಸಾಮಾಜಿಕವಾಗಿ ಅರಿವು ಮೂಡಿಸುವ ವೇಷ ಭೂಷಣಗಳನ್ನು ಧರಿಸಿ ತಮ್ಮೊಳಗಿನ ಪ್ರತಿಭೆಯನ್ನು ಪ್ರದರ್ಶಿಸಿ ತಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುವುದರ ಮೂಲಕ ವೇದಿಕೆಯಲ್ಲಿ ಮಿಂಚಿದರು.
ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಜ್ಞಾನ ಹೆಚ್ಚಲು ಒಂದು ಅವಕಾಶವಾಗಿದೆ. ಮಕ್ಕಳಿಗೆ ವೇಷಭೂಷಣ ತೊಡಿಸುವುದು ಒಂದು ರೋಮಾಂಚಕ ಅನುಭವ ಎಂದು ಪೋಷಕರು ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಮಕ್ಕಳ ಪೋಷಕರು ಉಪಸ್ಥಿತರಿದರು.

news-details