ನೆಲ್ಯಾಡಿ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಟ್ಯಾಲೆಂಟ್ಸ್ ಹಂಟ್ ಡೇ ಎನ್ನುವ ವಿನೂತನ ಕಾರ್ಯಕ್ರಮವನ್ನು 7ವೇದಿಕೆಗಳಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲಾ ಪೂರ್ವ ವಿದ್ಯಾರ್ಥಿ ಭರತ ನಾಟ್ಯ ಕಲಾವಿದೆ ಅನುಷಾ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮುಗ್ದತೆಯ ಪ್ರತಿರೂಪ ಮಕ್ಕಳ ಹೆಸರಿನಲ್ಲಿ ಚಾಚಾಜಿ ನೆಹರೂರವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತಿದೆ, ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಥನಿ ವಿದ್ಯಾಸಂಸ್ಥೆ ಆಯೋಜಿಸಿರುವ ಟ್ಯಾಲೆಂಟ್ ಹಂಟ್ ಡೇ ಕಾರ್ಯಕ್ರಮ ಅಭಿನಂದನಿಯ,ಬೆಥನಿ ಕಲಾವಿದೆಯಾಗಿ ನನ್ನನ್ನು ಪ್ರೋತ್ಸಾಹಿಸುತ್ತ ಅವಕಾಶ ನೀಡಿದ ಈ ವೇದಿಕೆ ದೇಶ ವಿದೇಶಗಳಲ್ಲಿ ನನಗೆ ಹಲವು ವೇದಿಕೆಗಳಲ್ಲಿ ಅವಕಾಶದೊರೆಯುವಂತಾಗಿದೆ. ಬೆಥನಿಯ ಗುರುಗಳು ನೀಡಿದ ಪ್ರೋತ್ಸಾಹ ಮರೆಯಲಾಗದ್ದು.ಮಕ್ಕಳ ಕನಸುಗಳಿಗೆ ಓದಿನ ಜೊತೆಗೆ ಪ್ರತಿಭಾ ಪ್ರದರ್ಶನಕ್ಕೆ ಪೋಷಕರು ನಿರಂತರ ಪ್ರೋತ್ಸಾಹ ನೀಡಬೇಕು ಆ ಮೂಲಕ ಬೆಥನಿಯ ಅಂಗಳದಲ್ಲಿ ಇನ್ನಷ್ಟು ಪ್ರತಿಭೆಗಳು ಬೆಳಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಬೆಥನಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ವರ್ಗಿಸ್ ಕೈಪನಡ್ಕ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಸನ್ನಿ ಕೆ. ಎಸ್, ಮೇರಿ ಸ್ಥಿಫನ್, ಉಪ ಪ್ರಾಂಶುಪಾಲರಾದ ಜೋಸ್ ಎಂ. ಜೆ, ಮುಖ್ಯ ಗುರುಗಳಾದ ಜಾರ್ಜ್ ತೋಮಸ್ ಮೊದಲಾದವರು ಉಪಸ್ಥಿತರಿದ್ದರು.
ಅನ್ಸಿ ಸ್ವಾಗತಿಸಿ, ಎಬಲ್ ಧನ್ಯವಾದ ಸಮರ್ಪಿಸಿ, ಆಲ್ಬ ರೈನಾ ನಿರೂಪಿಸಿದರು. ನಂತರ ಅನುಷಾ ಜೈನ್ ರವರಿಂದ ಭರತ ನಾಟ್ಯ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳು ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು.