ಆರ್ಯಪು ಮತ್ತು ಕೊಡಿಪ್ಪಾಡಿ ಗ್ರಾಮದಲ್ಲಿ ಹೈನುಗಾರರ ಮನೆ ಮನೆಗೆ ತೆರಳಿ ಕಾಲು ಬಾಯಿ ರೋಗದ ವಿರುದ್ದ ಲಸಿಕೆ

ಪುತ್ತೂರು

news-details

ಕೊಡಿಪ್ಪಾಡಿ ಗ್ರಾಮದಲ್ಲಿ ಹೈನುಗಾರರ ಮನೆ ಮನೆಗೆ ತೆರಳಿ ಕಾಲು ಬಾಯಿ ರೋಗದವಿರುದ್ದ ಲಸಿಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪುತ್ತೂರು ಜಾನುವಾರು ಅಭಿವೃದ್ದಿ ಅಧಿಕಾರಿ ಕೆ ಪುಷ್ಪರಾಜ ಶೆಟ್ಟಿ ಅವರು ಜಾನುವಾರು ಗಳಿಗೆ ಲಸಿಕೆ ಮಾಡಿದರು.
ಶ್ರೀಮತಿ ಶೋಭ ಪಶುಸಖಿ ಕೊಡಿಪ್ಪಾಡಿ ಹಾಗೂ ಶ್ರೀಮತಿ ಭವ್ಯ KMF ಕಾರ್ಯದರ್ಶಿ ಕೊಡಿಪ್ಪಾಡಿ ಇವರು ಸಹಕರಿಸಿದರು. ವಾಹನ ವ್ಯವಸ್ಥೆ ಗ್ರಾಮ ಪಂಚಾಯತ್ತು ಕೊಡಿಪ್ಪಾಡಿ ಇವರು ಮಾಡಿದ್ದರು.
ಆರ್ಯಪು ಗ್ರಾಮದಲ್ಲಿ 6 ನೇ ಸುತ್ತಿನ ಕಾಲುಬಾಯಿರೋಗದ ವಿರುದ್ದ ಲಸಿಕೆ ಹಾಕಾಲಾಯಿತು ಈ ಸಂದರ್ಭದಲ್ಲಿ ಆರ್ಯಪು ಗ್ರಾಮದ ಪಶುಸಖಿ ದಿಪಿಕಾ ಸಹಕರಿಸಿದರು ಹಾಗೂ ಜಾನುವಾರು ಅಭಿವೃದ್ದಿ ಅಧಿಕಾರಿ ಶ್ರೀ ಪುಷ್ಪರಾಜ ಶೆಟ್ಟಿ ಯವರು ಲಸಿಕೆ ಹಾಕಿದರು

news-details