ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವ ಆರಂಭ

ಪುತ್ತೂರು

news-details

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವವು ಸೀಮೆಯ ಮೊದಲ ಜಾತ್ರೆಯಾಗಿದ್ದು ಬ್ರಹ್ಮಶ್ರೀ ಕೆಮ್ಮಿ oಜೆ ನಾಗೇಶ್ ತಂತ್ರಿ ಗಳ ನೇತೃತ್ವದಲ್ಲಿ ನ.14 ರಿಂದ ಆರಂಭ ಗೊಂಡಿದೆ.
ನ. 15ರಂದು ಗಣಪತಿ ಹೋಮ, ನವ ಕಲಶ ಅಭಿಷೇಕ,ತುಲಾಭಾರ ಸೇವೆ, ಮಹಾಪೂಜೆ, ದೇವರ ಬಲಿ,ಪ್ರಸಾದ ವಿತರಣೆ,ಬ್ರಹ್ಮ ಸಮಾರಾಧನೆ ನಡೆಯಿತು.
ಅನುವಂಶಿಕ ಆಡಳಿತ ಮೊಕ್ತೇಸರರಾದ ಬಿ ವಿನೋದ್ ಕುಮಾರ್ ಬಳ್ಳಾಲ್ ಶಿವಗಿರಿ ಬೀಡು ಮತ್ತು ಮೊಕ್ತೇಸರರಾದ ವಿನೋದ್ ಕುಮಾರ್ ರೈ ಗುತ್ತು, ಆಡಳಿತ ಸಮಿತಿ, ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸದಸ್ಯರು ಭಕ್ತರು ಉಪಸ್ಥಿತರಿದ್ದರು
ಸಂಸದ ಬ್ರಿಜೇಶ್ ಚೌಟ ಭೇಟಿ
ಸೀಮೆಯ ಮೊದಲ ಜಾತ್ರೆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಲೋಕಸಭಾ ಸಂಸದ ಬ್ರಿಜೇಶ್ ಚೌಟ ಮೊದಲ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಪರವಾಗಿ ಅವರನ್ನು ಶಾಲು ಹಾಕಿ ಸ್ವಾಗತಿಸಲಾಯಿತು. ಬಿಜೆಪಿ ನಾಯಕ ಆರ್ ಸಿ ನಾರಾಯಣ್ ದೇವಸ್ಥಾನದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

news-details