ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವವು ಸೀಮೆಯ ಮೊದಲ ಜಾತ್ರೆಯಾಗಿದ್ದು ಬ್ರಹ್ಮಶ್ರೀ ಕೆಮ್ಮಿ oಜೆ ನಾಗೇಶ್ ತಂತ್ರಿ ಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ಗಳು ನಡೆಯುತ್ತಿದ್ದು
ಇಂದು ಪೂರ್ವಾಹ್ನ ಗಂಟೆ 10ರಿಂದ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ ರಾಜಾಂಗಣದಲ್ಲಿ ಮಹಾಪ್ರಸಾದ ವಿತರಣೆ,ಮಂತ್ರಾಕ್ಷತೆ,ಮಹಾಪೂಜೆ,
ಅನ್ನ ಸಂರ್ಪಣೆ ನಡೆಯಿತು. ಊರ ಪರ ಊರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಅನುವಂಶಿಕ ಆಡಳಿತ ಮೊಕ್ತೇಸರರಾದ ಬಿ ವಿನೋದ್ ಕುಮಾರ್ ಬಳ್ಳಾಲ್ ಶಿವಗಿರಿ ಬೀಡು ಮತ್ತು ಮೊಕ್ತೇಸರರಾದ ವಿನೋದ್ ಕುಮಾರ್ ರೈ ಗುತ್ತು, ಆಡಳಿತ ಮಂಡಳಿ,ಅಭಿವೃದ್ಧಿಯ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ದೇವಸ್ಥಾನಕ್ಕೆ ಭೇಟಿಕೊಟ್ಟು ಪ್ರಾರ್ಥನೆ ಸಲ್ಲಿಸಿದರು.ಅನುವಂಶಿಕ ಆಡಳಿತ ಮೊಕ್ತೇಸರರಾದ ಬಿ ವಿನೋದ್ ಕುಮಾರ್ ಬಳ್ಳಾಲ್ ಶಿವಗಿರಿ ಬೀಡು ಇವರು ಶಾಲು ಹಾಕಿ ಸ್ವಾಗತಿಸಿದರು.