ಹಿಂದೂ ಕ್ರಿಡೋತ್ಸವ 2025 ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು

news-details

ಜನವರಿ 26,ಆದಿತ್ಯವಾರದಂದು ಆಯೋಜನೆಯಾಗಿರುವ ಹಿಂದೂ ಕ್ರೀಡೊತ್ಸವ 2025ರ ಕರಪತ್ರ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರ ದೆಯ್ಯರ ಮಜಲು ದೈವಗಿರಿ ಬೊಣ್ಯಸಾಗು ಇಲ್ಲಿ ಗಣ್ಯರ ಸಮ್ಮುಖದಲ್ಲಿ ನೆರವೇರಿತು

ಕರಪತ್ರವನ್ನು ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಕುತ್ರಾಡಿ ಹಾರ್ಪಳದ ಆಡಳಿತ ಸಮಿತಿ ಅಧ್ಯಕ್ಷರಾದ ಸುಂದರ ಗೌಡ ಅತ್ರಿಜಾಲು ಅವರು ಬಿಡುಗಡೆಗೊಳಿಸಿದರು,

2025 ಜನವರಿ,26 ಆದಿತ್ಯವಾರ ದಂದು ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ ಹಾರ್ಪಳ ಸಂಘಟನೆಯ ವತಿಯಿಂದ, ಊರವರ ಸಹಕಾರದೊಂದಿಗೆ ಹಾಗು ಹಿಂದು ಪರ ಸಂಘನೆಗಳ ಸಹಭಾಗಿತ್ವದಲ್ಲಿ
ಈ ಕ್ರೀಡಾ ಕೂಟವು ಆಯೋಜನೆಯಾಗಿದ್ದು ಶ್ರೀ ಕ್ಷೇತ್ರ ದೈಯ್ಯರ ಮಜಲು, ದೈವಗಿರಿ, ಬೊಣ್ಯಸಾಗುಇಲ್ಲಿ ನಡೆಯಲಿದೆ

ಒಂದಷ್ಟು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶ ಹಾಗೂ ಹಿಂದೂ ಸಮಾಜವನ್ನು, ಕ್ರೀಡಾ ಕೂಟದ ಮೂಲಕ ಒಂದು ಗೂಡಿಸುವ ಪ್ರಯತ್ನದ ಅಂಗವಾಗಿ ಈ ಕ್ರೀಡಾ ಕೂಟ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ದೈವಸ್ಥಾನದ ಅಧ್ಯಕ್ಷರಾದ ಸತೀಶ್ಚಂದ್ರ ಗೌಡ ಅತ್ರಿಜಾಲು ಅವರು ಕ್ರೀಡಾ0ಗಣದ ಕೆಲಸ ಕಾರ್ಯಗಳಿಗೆ ಚಾಲನೆ ನೀಡಿದರು, ಹಿರಿಯರಾದ ಕೊರಗಪ್ಪ ಗೌಡ ಬಾಯ್ ತ್ರೋಡಿ ಹಾಗೂ ಶೀನಪ್ಪ ಗೌಡ ಬರಮೇಲು ಶುಭ ಹಾರೈಸಿದರು
ದೇವಸ್ಥಾನದ ಕೋಶಾಧಿಕಾರಿಗಳಾದ ಸೀತರಾಮ ಗೌಡ ಕಾನಮನೆ ಶ್ರೀ ಕ್ಷೇತ್ರ ಧ. ಗ್ರಾ.ಯೋಜನೆ ಕಡಬ , ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಹಾರ್ಪಳ ದೈವಸ್ಥಾನದ ಪರಿಚಾರಕರಾದ ಕುಶಾಲಪ್ಪ ಗೌಡ ಮರ್ವೊಡಿ, ಕುಶಾಲಪ್ಪ ಗೌಡ ಶಿವನಿಲಯ , ಪಮ್ಮಣ್ಣ ಗೌಡ ಬೊಣ್ಯಸಾಗು,ಸುಂದರ ಗೌಡ ಬಾಯ್ ತ್ರೋಡಿ, ಹಿರಿಯರಾದ ರುಕ್ಮಯ ಗೌಡ ದಗ್ಗೋಡಿ,ಶಾಸ್ತಾರ ಫ್ರೆಂಡ್ಸ್ ಅಧ್ಯಕ್ಷರಾದ ಶಿವಪ್ರಸಾದ್ ದುಗ್ಗಲ ಪದಾಧಿಕಾರಿಗಳಾದ ನಾಗೇಶ್ ಗಡಿಕಲ್ಲು, ದಿನೇಶ್ ನಾಯ್ಕ್, ಹಾಗೂ ಶಾಸ್ತಾರ ಫ್ರೆಂಡ್ಸ್ ನ ಸದಸ್ಯರು,ಗ್ರಾಮಸ್ಥರುಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು

news-details