ದಕ್ಷಿಣ ಕನ್ನಡ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್( ರಿ ) ಇದರ ವತಿಯಿಂದ ಪುತ್ತೂರು ನ ಎಪಿಎಂಸಿ ರೈತ ಸಮುದಾಯ ಭವನದಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ 2024 ನಲ್ಲಿ ಹನುಮಗಿರಿ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನಘ ಕೆ ಇವರು yellow ಬೆಲ್ಟ್ ನ ಕಟ ವಿಭಾಗ ದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ, ಪ್ರಶಸ್ತಿ ಪತ್ರ ಪಡೆದುಕೊಂಡರು ಮತ್ತು ಕುಮಿಟೆ ವಿಭಾಗ ದಲ್ಲಿ ದ್ವಿತೀಯ ಸ್ಥಾನ ಪಡೆದ ಟ್ರೋಫಿ, ಪ್ರಶಸ್ತಿ ಪತ್ರವನ್ನು ಪಡೆದುಕೊಂಡರು. ಕರಾಟೆ ಶಿಕ್ಷಕ ನಾರಾಯಣ ಆಚಾರ್ಯ ತರಬೇತಿ ನೀಡಿದರು. ಇವಳು ಪಡುವನ್ನೂರು ಗ್ರಾಮದ ಸುಳ್ಯ ಪದವು ಸಮೀಪದ ಕನ್ನಡ್ಕದ ಪತ್ರಕರ್ತರಾದ ಮಾಧವ ನಾಯಕ್, ವಿದ್ಯಾಲಕ್ಷ್ಮೀ ದಂಪತಿಗಳ ಸುಪುತ್ರಿ.