ಕುಂಬಳೆ ಸೀಮೆಯ ಮೊದಲ ಜಾತ್ರೋತ್ಸವ ಸಂಪನ್ನ

ಪುತ್ತೂರು

news-details

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವವು ಕುಂಬಳೆ ಸೀಮೆಯ ಮೊದಲ ಜಾತ್ರೆಯಾಗಿದ್ದು ಬ್ರಹ್ಮಶ್ರೀ ಕೆಮ್ಮಿoಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ನ.14 ರಿಂದ 17 ರವರೆಗೆ ನಡೆಯಿತು.
ನ.14 ರಂದು ಬಲಿವಾಡು ಶೇಖರಣೆ ರಾತ್ರಿ ಶ್ರೀ ಮಹಾಗಣಪತಿ ದೇವರ ಪೂಜೆ ನಡೆಯಿತು.
ನ.15ರಂದು ಗಣಪತಿ ಹೋಮ, ನವ ಕಲಶ ಅಭಿಷೇಕ,ತುಲಾಭಾರ ಸೇವೆ, ಮಹಾಪೂಜೆ, ದೇವರ ಬಲಿ,ಪ್ರಸಾದ ವಿತರಣೆ,ಬ್ರಹ್ಮ ಸಮಾರಾಧನೆ.ರಾತ್ರಿ ಮಹಾಪೂಜೆ,ಉತ್ಸವ ಶ್ರೀದೇವರ ಭೂತ ಬಲಿ ನಡೆಯಿತು. ನಂತರ
ದೇವರ ಬಲಿ ಹೊರಟು ಕಟ್ಟೆ ಪೂಜೆ, ಬಿಲ್ವಗಿರಿ ಪ್ರವೇಶ,ಕೆರೆ ಉತ್ಸವ ಪುನಃ ದೇವಾಲಯಕ್ಕೆ ಬಂದು ದೇವರ ಒಳಗಾಗಿ ಮಂಗಳಾರತಿ ನಡೆಯಿತು.
ನ. 16 ಪೂರ್ವಾಹ್ನ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ ರಾಜಾಂಗಣದಲ್ಲಿ ಮಹಾಪ್ರಸಾದ ವಿತರಣೆ,
ಮಂತ್ರಾಕ್ಷತೆ, ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ದೇವರ ಮಹಾಪೂಜೆ, ಶ್ರೀ ಜಠಾಧಾರಿ ದೈವದ ಬಂಡಾರ ತೆಗೆದು ಶ್ರೀ ಜಠಾಧಾರಿ ದೈವದ ಮಹಿಮೆ ನಡೆಯಿತು.
ನ. 17 ರಂದು ಪೂರ್ವಾಹ್ನ ಧೂಮಾವತಿ ನೇಮ, ಮಧ್ಯಾಹ್ನ ಮಹಾಪೂಜೆ,ಅಪರಾಹ್ನ ಗಂಟೆ 2-00 ಹುಲಿ ಭೂತನೇಮ ನಡೆದು ಜಾತ್ರೋತ್ಸವ ಸಂಪನ್ನ ಗೊಂಡಿತು.
ನ. 15ರಂದು ಸಂಜೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ರಾತ್ರಿ ಬಿಲ್ವಗಿರಿ ಕಟ್ಟೆ ಪೂಜೆಯ ಸಂದರ್ಭದಲ್ಲಿ ಊರ ಹತ್ತು ಸಮಸ್ತರಿಂದ ಬೆಟ್ಟಂಪಾಡಿ ಬೆಡಿ ನಡೆಯಿತು. ನ. 16ರಂದು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೊಡುವಿಕೆಯಿಂದ ಯಕ್ಷಗಾನ ತಾಳಮದ್ದಲೆ ಜರಗಿತು. ಅನುವಂಶಿಕ ಆಡಳಿತ ಮೊಕ್ತೇಸರರಾದ ಬಿ ವಿನೋದ್ ಕುಮಾರ್ ಬಳ್ಳಾಲ್ ಶಿವಗಿರಿ ಬೀಡು ಮತ್ತು ಮೊಕ್ತೇಸರರಾದ ವಿನೋದ್ ಕುಮಾರ್ ರೈ ಗುತ್ತು , ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯರು ಪಾಲ್ಗೊಂಡರು.
ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಿ.ಜೆ.ಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಶಾಸಕ ಅಶೋಕ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹಾಗೂ ಹಲವರು ಜನಪ್ರತಿನಿಧಿಗಳು, ಧಾರ್ಮಿಕ ಸಾಮಾಜಿಕ ಮುಖಂಡರು ಮತ್ತು ಊರ ಪರವೂರ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು.

news-details