ಪಾಣಾಜೆ ಆರ್ಲಪದವು ಕಿನ್ನಿಮಾಣಿ - ಪೂಮಾಣಿ , ಹುಲಿಭೂತ ದೈವಸ್ಥಾನದ ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆದೈವಸ್ಥಾನದ ಬ್ರಹ್ಮಕಲವೋತ್ಸವ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯು ನ. 17ರಂದು ಸಂಜೆ ಪಾಣಾಜೆ ಸಿ ಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಬೋಳಿಲ್ಲಾಯ, ಸಂಚಾಲಕರಾದ ಶಶಿಕುಮಾರ್ ರೈ ಬಾಲ್ಯೋಟು, ಅಧ್ಯಕ್ಷರಾದ ಜಗನ್ಮೋಹನ್ ರೈ ಸೂರಂಬೈಲು, ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಸದಾಶಿವ ರೈ ಸೂರಂಬೈಲು , ರಾಜರಾಮ್ ಭಟ್ಟ್ ಸೂರ್ಯಂಬೈಲು, ರಮನಾಥ ರೈ ಪಡ್ಯಂಬೆಟ್ಟು , ಶ್ರೀಹರಿ ನಡುಕಟ್ಟ, ಭಾಸ್ಕರ ಪೂಜಾರಿ ನಡುಕಟ್ಟ, ಜಯಶ್ರೀ ದೇವಸ್ಯ, ಹಾಗೂ ಗ್ರಾಮಸ್ಥರ ಉಪಸ್ಥಿತರಿದ್ದರು. ಈ ವರೆಗೆ ನಡೆದ ಖರ್ಚು ವೆಚ್ಚಗಳ ವಿವರಗಳನ್ನು ಮಂಡಿಸಲಾಯಿತು.
ಬ್ರಹ್ಮಕಲಶೋತ್ಸವಕ್ಕೆ ಸಮಿತಿ, ಉಪ ಸಮಿತಿ ರಚಿಸಿ ಆಯಾ ಸಮಿತಿಗಳಿಗೆ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಭಕ್ತರು ಬಂದು ಸಹಕರಿಸಿ,ಸಲಹೆ ಸೂಚನೆಗಳನ್ನು
ನೀಡಿದರು.