ಉರ್ವ ಮಾರ್ಕೆಟ್ ನಿಂದ ಸುಲ್ತಾನ್ ಬತ್ತೆರಿಯ ಮಾರ್ಗದ ನಡುವಿನಲ್ಲಿರುವ ರಸ್ತೆ ವಿಭಜಕದಲ್ಲಿ ಗಿಡ ನೆಡುವ ಕಾರ್ಯಕ್ರಮ

ಮಂಗಳೂರು

news-details

ಬೆಸೆಂಟ್ ಇವಿನಿಂಗ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.)ಮಂಗಳೂರು ಇದರ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಂಗಳೂರಿನ ಮೇಯರ್ ಶ್ರೀ ಮನೋಜ್ ಕುಮಾರ್ ಗಿಡ ನೆಡುವ ಮೂಲಕ ಉದ್ಘಾಟಸಿದರು. ನಂತರ ಮಾತನಾಡಿ ಬೆಸೆಂಟ್ ಇವಿನಿಂಗ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರಿನ ಸೌದರ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದೆ. ದೇವರು ಮೆಚ್ಚುವಂತಹ ಕೆಲಸ ಮಾಡಿದ್ದೀರಿ, ಮಹಾನಗಾರಪಾಲಿಕೆಗೆ ಜೊತೆ ಹೀಗೆ ಸಹಕಾರ ಸಹಾಯ ಇರಲಿ, ಟ್ರಸ್ಟ್ ಎಲ್ಲಾ ಕಾರ್ಯಕ್ರಮಕ್ಕೆ ನಮ್ಮ ಸಹಕಾರ ಇದೆ, ಟ್ರಸ್ಟ್ ಮುಂದೆಯು ಕೂಡ ಒಳ್ಳೆಯ ಸಮಾಜಮುಖಿ ಕಾರ್ಯಕ್ರಮಗಳ ಮುಖಂತರ ಮಂಗಳೂರಿನಲ್ಲಿ ಉತ್ತಮವಾದ ಸಂಸ್ಥೆಯಾಗಿ ಬೆಳೆಯಲ್ಲಿ ಎಂದು ಶುಭಹಾರೈಸಿದರು
ನಗರದ ಉರ್ವ ಮಾರ್ಕೆಟ್ ನಿಂದ ಸುಲ್ತಾನ್ ಬತ್ತೆರಿಯ ಮಾರ್ಗದ ನಡುವಿನಲ್ಲಿರುವ ರಸ್ತೆ ವಿಭಜಕದಲ್ಲಿ 70ಕ್ಕೂ ಹೆಚ್ಚು ಗಿಡಗಳನ್ನು ನೇಡಲಾಯಿತು. ಈ ಗಿಡಗಳ ನಿರ್ವಹಣೆಯನ್ನು ಟ್ರಸ್ಟ್ ಮಾಡಲಿದೆ.
ಮುಖ್ಯ ಅತಿಥಿಯಾಗಿ ಕಾರ್ಪೊರೇಟರ್ ಗಳಾದ ಶ್ರೀ ಗಣೇಶ್ ಕುಲಾಲ್, ಹಾಗೂ ಶ್ರೀ ಜಗದೀಶ್ ಶೆಟ್ಟಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಗೌರವ ಅಧ್ಯಕ್ಷರಾದ ಶ್ರೀ ಶಿವ ಪ್ರಸಾದ್ ಶೆಟ್ಟಿ, ಅಧ್ಯಕ್ಷರಾದ ಶ್ರೀ ಪ್ರಸಾದ್ ಮರೋಳಿ, ಕಾರ್ಯದರ್ಶಿ ಶ್ರೀ ನವೀನ್ ಸಾಲಿಯಾನ್, ಖಜಾಂಜಿ ಶ್ರೀ ಸುಧೀರ್ ಹಾಗೂ ಟ್ರಸ್ಟಿನ ಸದಸ್ಯರು ಭಾಗವಹಿಸಿದ್ದರು.

news-details