ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡ್ನೂರು ಗ್ರಾಮದ ಎರಡನೇ ವಾರ್ಡಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ವಿನಯ ಕುಮಾರ್ ರವರ ಪರ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೃಷ್ಣಪ್ರಸಾದ್ ಆಳ್ವರು ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಶಶಿಕಲಾ ಚೌಟ, ಸ್ಥಳೀಯ ಪಂಚಾಯತ್ ಸದಸ್ಯರು ಜಯಂತಿ ಪಟ್ಟುಮೂಲೆ, ಅಬ್ದುಲ್ ರಹಿಮಾನ್ ಅರಿಯಡ್ಕ, ಮೋನಪ್ಪ ಪೂಜಾರಿ ಕೆರೆಮೂಲೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಪದಾಧಿಕಾರಿಗಳಾದ ಸಂತೋಷ್ ಭಂಡಾರಿ ಚಿಲ್ಮೆತ್ತಾರ್, ವಿಕ್ರಮ್ ರೈ ಸಾಂತ್ಯ, ಅಶ್ರಫ್ ಉಜಿರೋಡಿ, ಅಝೀಜ್, ಸುಪ್ರೀತ್ ಕಣ್ಣಾರಾಯ, ರವಿ ಪೂಜಾರಿ ಮತ್ತಿತರರು ಜೊತೆಗಿದ್ದರು.