ಮಂಗಳ ಸಮೂಹ ವಿದ್ಯಾಸಂಸ್ಥೆಯ ಅಂಗಸ೦ಸ್ಥೆಯಾದ ನ್ಯೂ ಮಂಗಳಾ ಕಾಲೇಜ್ ಆಪ್ ನರ್ಸಿಂಗ್ ಇದರ NSS ಘಟಕ ಮತ್ತು ಮಕ್ಕಳ ಆರೋಗ್ಯ ಶುಶ್ರೂಷ ವಿಭಾಗದ ನರ್ಸಿಂಗ್ ವಿದ್ಯಾರ್ಥಿಗಳೊಂದಿಗೆ "ಭವಿಷ್ಯವನ್ನುಆಲಿಸಿ" ಎಂಬ ವಿಷಯದ ಮೇಲೆ
ವಿಶ್ವ ಮಕ್ಕಳ ದಿನವನ್ನು SDM ಮಂಗಳ ಜ್ಯೋತಿ ಸಂಯೋಜಿತ ಶಾಲಾ ಸಭಾಂಗಣದಲ್ಲಿ ನವೆಂಬರ್ 19, 2024ರಂದು ಆಚರಿಸಲಾಯಿತು.
ಮಕ್ಕಳಿಗೆ ಹಣ್ಣು-ಹಂಪಲು ಹಾಗೂತಿಂಡಿ-ತಿನಿಸುಗಳೊಂದಿಗೆ ಚಿಕ್ಕ ಉಡುಗೊರೆ ನೀಡುವ ಮೂಲಕ ಚಿತ್ರಕಲಾ ಸ್ಪರ್ಧೆ, ವಿವಿಧ ಆಟಗಳು ಮತ್ತು ಚಟುವಟಿಕೆಗಳನ್ನು ನಡೆಸಿದರು. ಸುಮಾರು 100 ದೈಹಿಕವಾಗಿ ಸವಾಲಿನ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹಳ ಸಂತೋಷದಿಂದ ಚಟುವಟಿಕೆಗಳನ್ನು ಆನಂದಿಸಿದರು.