ಈಶ್ವರಮಂಗಲ ಹನುಮಗಿರಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕರ ಸಭೆ

ಪುತ್ತೂರು

news-details

ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಹನುಮಗಿರಿ ಈಶ್ವರಮಂಗಲ ಇಲ್ಲಿ ಶಿಕ್ಷಕ-ರಕ್ಷಕರ ಸಭೆ ಯು ನ. 23ರಂದು ನಡೆಯಿತು.
ಸಭೆಯನ್ನು ದೀಪ ಪ್ರಜ್ವಲನೆಯ ಮೂಲಕ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ನನ್ಯ ಅಚ್ಚುತ ಮೂಡೆತ್ತಾಯರವರು ಉದ್ಘಾಟಿಸಿ ಮಾತನಾಡಿ ಶಾಲಾ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟದ ಪೂರ್ವ ತಯಾರಿಯ ಬಗ್ಗೆ ಮಾಹಿತಿ ನೀಡಿ ಎಲ್ಲರ ಸಹಕಾರವನ್ನು ಕೋರಿದರು.
ಮುಖ್ಯ ಅತಿಥಿಯಾದ ಇಂದ್ರಪ್ರಸ್ಥ ವಿದ್ಯಾಲಯದ ಶಿಕ್ಷಕಿ ಶ್ರೀಮತಿ ಸುಪ್ರೀತಾ ರೈ ಇವರು ವಿವೇಕಾನಂದ ವಿದ್ಯಾವರ್ಧಕ ಸಂಘ ಹೊರತಂದಿರುವ ಇಂಗ್ಲಿಷ್ ಗ್ರಾಮರ್ ಆ್ಯಂಡ್ ಕಮ್ಯುನಿಕೇಶನ್ ಎಂಬ ಪುಸ್ತಕದ ಬಗ್ಗೆ ಮಾಹಿತಿಯನ್ನು ನೀಡುತ್ತಾ ,ಪ್ರಸ್ತುತ ಮಕ್ಕಳಿಗೆ ಇಂಗ್ಲಿಷ್ ಅತ್ಯಗತ್ಯ, ಭಾರತೀಯ ಸಂಸ್ಕೃತಿ ಮತ್ತು ಕೌಶಲ್ಯವನ್ನು ಬೆಳೆಸುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಮಕ್ಕಳಿಗೆ ಉಪಯೋಗವಾಗುವಂತೆ ಈ ಪುಸ್ತಕವನ್ನು ರಚಿಸಲಾಯಿತು ಎಂಬ ಮಾಹಿತಿಯನ್ನು ನೀಡಿದರು. ಪ್ರಾಂಶುಪಾಲರಾದ ಕೆ ಶಾಮಣ್ಣ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಸಂಚಾಲಕರಾದ ಶಿವರಾಂ ಪಿ, ಇವರು ಶಾಲೆಯ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪೋಷಕರ ಪಾತ್ರ ಅತಿ ಅಮೂಲ್ಯವಾದದು ಎಂದು ಹೇಳಿದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸೌಮ್ಯ ಎ ಇವರು ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಪೋಷಕರಿಗೆ ಹಮ್ಮಿಕೊಂಡಿರುವ ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಆಡಳಿತ ಮಂಡಳಿಯ ಸದಸ್ಯರಾದ ಜಯ್ ರಾಜ್ ರೈ ಇವರು ಪೋಷಕ ವರ್ಗದವರೆಲ್ಲರೂ ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು . ಶಿಕ್ಷಕಿಯರಾದ ಶ್ರೀಮತಿ ಜಯಸ್ವಿನಿ ಮತ್ತು ಕು.ಗುಣಶ್ರೀ ಪ್ರಾರ್ಥಿಸಿ, ಶಿಕ್ಷಕಿ ಶ್ರಿಮತಿ ಶ್ವೇತ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಶ್ರಿಮತಿ ಲತಾ ಡಿ ಕೆ ವಂದಿಸಿದರು. ಶಿಕ್ಷಕಿ ಶ್ರೀಮತಿ
ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.

news-details