ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ್ರೌಢ ಶಾಲೆಯಇಲ್ಲಿ ನ.23 ರಂದು ಶಾಲಾ ವಾರ್ಷಿಕ ಕ್ರೀಡಾಕೂಟ ಜರುಗಿತು.
ಶ್ರೀ ಗಜಾನನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾದ ಶ್ರೀ ನರೇಂದ್ರ ಭಟ್ ಇವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಈಶ್ವರ ಮಂಗಲ ಪಂಚಲಿಂಗೇಶ್ವರ ದೇವಸ್ಥಾನದಿಂದ ಆಗಮಿಸಿದ ಕ್ರೀಡಾ ಜ್ಯೋತಿ ಯನ್ನು ತಿಲಕ್. ಬಿ (ಹಿರಿಯ ವಿದ್ಯಾರ್ಥಿ ಹಾಗೂ ಮಾಲಕರು ಎಲ್ ಎನ್ ಟಿ ಲ್ಯಾಡರ್ಸ್ )ಇವರು ದೀಪ ಪ್ರಜ್ವಲನ ಮಾಡು ವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಗುರುಗಳಾದ ಶ್ರೀಮತಿ ವನಿತಾ. ಕೆ ವಹಿಸಿದರು. ಕಾರ್ಯಕ್ರಮ ದಲ್ಲಿ ಪ್ರಾರ್ಥನೆ ಯನ್ನು ಶಿಕ್ಷಕರಾದ ಸುರೇಶ್,ಸ್ವಾಗತವನ್ನು ದೈಹಿಕ ಶಿಕ್ಷಕರಾದ ಮುರಳಿ ಮೋಹನ.ಶೆಟ್ಟಿ ಮತ್ತು ಧನ್ಯವಾದವನ್ನು ಶಿಕ್ಷಕಿ ಪ್ರತಿಮಾ ಹಾಗೂ ನಿರೂಪಣೆ ವಿಜ್ಞಾನ ಶಿಕ್ಷಕಿ ವಂದನಾ ನೆರವೇರಿಸಿದರು.ನಂತರ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿತು.