ನ. 25 ರಂದು ನೆಟ್ಟಣಿಗೆ ಮುಡ್ನೂರು ಗ್ರಾಮದ ಗೋಳಿದಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ SDMC ರಚನೆಯಾಯಿತು.
ನೆಟ್ಟಣಿಗೆ ಮುಡ್ನೂರು ಗ್ರಾಮಪಂಚಾಯತ್ ಸದಸ್ಯರಾದ ಮೊಹಮ್ಮದ್ ರಿಯಾಜ್ ಮಾತನಾಡಿ ಶಾಲೆಯ ಅಭಿವೃದ್ಧಿ ಗೆ ಎಲ್ಲರ ಸಹಕಾರ ಬೇಕು ಎಂದು ಹೇಳಿ ಶುಭಹಾರೈಸಿದರು.
ಅಧ್ಯಕ್ಷರಾಗಿ ಮೊಹಮ್ಮದ್ ಸಾನ್ ವಾಸ್ ಜಿ. ಎ
ಉಪಾಧ್ಯಕ್ಷರಾಗಿ ಶಾಫಿ ಸರೋಳಿ ಆಯ್ಕೆಯಾದರು.
ಸದಸ್ಯರಾಗಿ ಇಬ್ರಾಹಿಂ ದಾರಿಮಿ, ಶರೀಫ್ ಮೂಲೆ, ಜಾಫರ್ ಶರೀಫ್ ಕುದ್ಕುಳಿ, ಮನ್ಸೂರ್ ಕಟ್ಟಪುಣಿ, ಹನೀಫ್ ಗೋಳಿದಡಿ, ಆದಂ ಕುಂಞ, ಮುಹಮ್ಮದ್ ಹನೀಫ್ , ಹಾಜಿ ವಿ.ಕೆ ಉಮ್ಮರ್ ಮುಸ್ಲಿಯಾರ್, ಬಾಲಕೃಷ್ಣ , ನಾರಾಯಣ ನಾಯ್ಕ, ಮಹಮ್ಮದ್ ಅಲಿ, ತೇಜಸ್ವಿನಿ, ಮೈಮೂನ, ಉಮ್ಮು ಕುಲ್ಸು , ಸುನೀತಾ ಕೊಟ್ಯಾಡಿ , ಶುಭ ಆಯ್ಕೆಯಾದರು. ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ವಿದ್ಯಾಕುಮಾರಿಯವರು ಕಾರ್ಯದರ್ಶಿಯವರಾಗಿರುತ್ತಾರೆ. ಶಾಲಾ ಅಧ್ಯಾಪಕ ವೃಂದದವರು ಸಹಕರಿಸಿದರು.