ಪಾಣಾಜೆ:ಪಂಚಾಯತ್ ಅಧ್ಯಕ್ಷ ರಿಗೆ, ಸದಸ್ಯರಿಗೆ, ಪಿಡಿಒ ರವರಿಗೆ ಅಗೌರವ ತೋರಿಸಿದ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸದಸ್ಯರು ಆಗ್ರಹಿಸಿ, ಸಿಇಒಗೆ ಪತ್ರ ಬರೆಯಲು ಪಾಣಾಜೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಪಾಣಾಜೆ ಗ್ರಾಮ ಸಾಮಾನ್ಯ ಸಭೆ ಯು ಪಂಚಾಯತ್ ಅಧ್ಯಕ್ಷೆ ಮೈಮುನತುಲ್ ಮೆಹ್ರ ಇವರ ಅಧ್ಯಕ್ಷತೆ ಯಲ್ಲಿ ಬುಧವಾರ ಪಂಚಾಯತ್ ಸಭಾಂಗಣ ದಲ್ಲಿ ನಡೆಯಿತು.
ಪಂಚಾಯತ್ ಸದಸ್ಯ ರೋರ್ವರವರಿಗೆ ಪಂಚಾಯತ್ ಸಿಬ್ಬಂದಿ ಯೋ ರ್ವ ಮಾತಿನಲ್ಲಿ ಅಗೌರವ ತೋರಿಸಿದ ಬಗ್ಗೆ ಗಂಭೀರ ಚರ್ಚೆ ನಡೆಯಿತು.ಸಿಬ್ಬಂದಿ ಗಳು
ಪಂಚಾಯತ್ ಅಧ್ಯಕ್ಷ , ಸದಸ್ಯರು ಪಿಡಿಒ ರವರೂ ಹೇಳಿದ ಮಾತು ಕೇಳುವುದಿಲ್ಲ. ಸಿಬ್ಬಂದಿ ಗಳ ಸಂಬಳ ವನ್ನು ಕೂಡ ಹೆಚ್ಚು ಮಾಡಿ ದ್ದೇವೆ. ಪಂಚಾಯತ್ ಕೆಲಸ ಕಾರ್ಯ ಗಳು ಸಮರ್ಪಕವಾಗಿ ನಡೆಯುವುದಿಲ್ಲ ಎಂದು ಸಿಬ್ಬಂದಿ ಗಳ ಕೆಲಸ ಕಾರ್ಯ ಗಳ ಬಗ್ಗೆ ಅಧ್ಯಕ್ಷರು, ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿದರು., ಪಂಚಾಯತ್ ಸಿಬ್ಬಂದಿಗಳು ಗ್ರಾಮ ಪಂಚಾಯತ್ ಕೆಲಸ ಕಾರ್ಯಗಳು ಸುಸೂತ್ರ ವಾಗಿ ನಡೆಸುವಂತೆ ಪಿಡಿಒ ರವರು ನೋಡಿಕೊಳ್ಳಬೇಕು ಎಂದು ಸದಸ್ಯ ರು ಹೇಳಿದರು.ಅಗೌರವ ತೋರಿಸಿದ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸಿಇ ಒ ಗೆ ಬರೆಯಲು ನಿರ್ಣಯ ಕೈ ಗೊಳ್ಳಲಾಯಿತು.
ತಾತ್ಕಾಲಿಕ ನೆಲೆಯಲ್ಲಿ ಸಿಬ್ಬಂದಿಯ ನೇಮಕ ಮಾಡುವುದು ಮತ್ತು ಖಾಲಿ ಇರುವ ಹುದ್ದೆಗೆ ಸಿಬ್ಬಂದಿ ಯನ್ನು ನೇಮಿಸುವ ಬಗ್ಗೆ ಚರ್ಚೆ ನಡೆದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದರ ಬಗ್ಗೆ ಚರ್ಚೆ ನಡೆಯಿತು.
ರಸ್ತೆ ಮಾರ್ಜಿನ ನಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಿರುವ ಬಗ್ಗೆ ಗ್ರಾಮಸ್ಥರಿಂದ ಬಂದ ಅರ್ಜಿ ಯ ಸತ್ಯ ಸತ್ಯತೆ ಬಗ್ಗೆ ಚರ್ಚೆ ನಡೆಯಿತು. ನಂತರ ಚರ್ಚೆ ನಡೆದು ಕಾನೂನು ಸಲಹೆ ಮತ್ತು ಮೇಲಾಧಿ ಕಾರಿಗಳ ಸಲಹೆ ಪಡೆದು ಮುಂದುವರಿಯುವ ಬಗ್ಗೆ ಸದಸ್ಯರು ಹೇಳಿದರು.
ಉಪಾಧ್ಯಕ್ಷೆ ಜಯಶ್ರೀ, ಸದಸ್ಯ ರಾದ ನಾರಾಯಣ ನಾಯಕ್,ಮೋಹನ ನಾಯ್ಕ , ಅಬೂಬಕ್ಕರ್,ಸುಭಾಶ್ ಭಾರತಿ ಭಟ್, ಸುಲೋಚನಾ , ವಿಮಲ, ಉಪಸ್ಥಿತರಿದ್ದರು.
ಪ್ತಭಾರ ಪಿಡಿಒ ಆಶಾ ಸ್ವಾಗತಿಸಿ, ವಂದಿ ಸಿದರು.