ಪಾಣಾಜೆಯ ಹಿರಿಯ ಟೈಲರ್ ಕೊಂಡಪ್ಪಾಡಿ ಜತ್ತಪ್ಪ ರೈ ನಿಧನ

ಪುತ್ತೂರು

news-details

ಪಾಣಾಜೆ ಗ್ರಾಮದ ಕೊಂಡಪ್ಪಾಡಿ ನಿವಾಸಿ ಹಿರಿಯ ಟೈಲರ್ ಮತ್ತು ಕೃಷಿಕರಾಗಿದ್ದ ಜತ್ತಪ್ಪ ರೈ( 70) ಎಂಬವರು ನ.25 ರಂದು ತಡ ರಾತ್ರಿ ಹೃದಯಾಘಾತದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಇವರಿಗೆ ನ್ಯುಮೋನಿಯಾ ಜ್ವರ ಇದ್ದ ಕಾರಣ ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆಗೆ ಸ್ಪಂದಿಸದ ಕಾರಣ ಹೃದಯಾಘಾತ ಸಂಭವಿಸಿ ನಿಧನರಾದರೆಂದು ತಿಳಿದು ಬಂದಿದೆ.
ಹಿಂದೆ ಕೆಲವು ವರ್ಷ ವಿದೇಶದಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದು ನಂತರ ಊರಿಗೆ ಮರಳಿ ಆರ್ಲಪದವಿನಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದ ಇವರು ಕೆಲವು ವರ್ಷಗಳಿಂದ ಟೈಲರ್ ವೃತ್ತಿ ನಿಲ್ಲಿಸಿ ಕೃಷಿ ಕೆಲಸ ನಡೆಸುತ್ತಿದ್ದರು. ಇವರು ಗ್ರಾಮ ಮಟ್ಟದಲ್ಲಿ ಬಿ.ಜೆ.ಪಿ ಪಕ್ಷದ ವಿವಿಧ ಜವಾಬ್ದಾರಿ ನಿರ್ವಹಿಸಿದ್ದರು.
ಮೃತರು ಪತ್ನಿ ಭಾಗೀರಥಿ,ಪುತ್ರರಾದ ಸುರೇಂದ್ರ ರೈ, ರವೀಂದ್ರ ರೈ, ಸಚೀಂದ್ರ ರೈ ಹಾಗೂ ಪುತ್ರಿ ರಂಜಿತಾ, ಅಳಿಯ ರಾಕೇಶ್ ರೈ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಮೃತರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

news-details