ಕಾರಣಿಕ ಕ್ಷೇತ್ರ ಪಾಣಾಜೆ ಗ್ರಾಮದ ಆರ್ಲಪದವು ಕಿನ್ನಿಮಾಣಿ-ಪೂಮಾಣಿ, ಪಿಲಿಭೂತ ದೈವಸ್ಥಾನ : ವೇಗ ಪಡೆದುಕೊಂಡ ಜೀರ್ಣೋದ್ಧಾರದ ಕೆಲಸ ಕಾರ್ಯ ಗಳು

ಪುತ್ತೂರು

news-details

ಕಾರಣಿಕ ಕ್ಷೇತ್ರ ಪಾಣಾಜೆ ಗ್ರಾಮದ ಆರ್ಲಪದವು ಕಿನ್ನಿಮಾಣಿ-ಪೂಮಾಣಿ, ಪಿಲಿಭೂತ ದೈವಸ್ಥಾನ ದ ಬ್ರಹ್ಮಕಲಶೋತ್ಸವವು 2025 ರ ಜನವರಿ19, 20 ಕ್ಕೆ ನಿಗದಿಯಾಗಿದೆ. ದೈವಸ್ಥಾನವು ವ್ಯವಸ್ಥಿತವಾಗಿ ಜೀರ್ಣೋದ್ಧಾರಗೊಳ್ಳುವಲ್ಲಿ ಆಡಳಿತ ಮೊಕ್ತೇಸರರು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು , ಭಕ್ತಾದಿಗಳು ಬಹಳಷ್ಟು ಮುತುವರ್ಜಿಯಿಂದ ಕೆಲಸಕಾರ್ಯಗಳನ್ನು ಮಾಡುತ್ತಿದ್ದಾರೆ.
ಹೆಚ್ಚಿನ ಧನ ಸಹಾಯದ ಅಗತ್ಯವಿರುವುದರಿಂದ ಅದರ ನಿರೀಕ್ಷೆಯ ಜೊತೆಗೆ ಕೆಲಸಕಾರ್ಯಗಳು ನಡೆಯುತ್ತಿದೆ.
ದೈವಗಳ ಕಾರಣಿಕೆ ನಂಬಿಕೆ ಎಂದಿಗೂ ಕೈ ಬಿಡಲ್ಲ ಅನ್ನುವ ಸಂಕಲ್ಪದ ಜೊತೆಗೆ ವಾರ್ಷಿಕ ಜಾತ್ರೋತ್ಸವದ ದಿನಾಂಕ ಬದಲಾಗದೇ ಎಂದಿನಂತೆ ಜನವರಿ 22 ರಂದು ಆರಂಭವಾಗಬೇಕೆಂಬ ದೃಢ ಸಂಕಲ್ಪ ದಲ್ಲಿ ಭಕ್ತಾದಿಗಳೆರನ್ನು ಒಟ್ಟುಗೂಡಿಸಿ ಸಭೆ ಮಾಡಿ ಬ್ರಹ್ಮಕಲಶೋತ್ಸವ ದಿನವು ನಿಗದಿ ಮಾಡಿ, ಸಮಿತಿಯನ್ನು ರಚನೆ ಮಾಡಲಾಗಿದೆ.
ಜೀರ್ಣೋದ್ಧಾರ ಕೆಲಸಕಾರ್ಯಗಳು ಆದಷ್ಟೂ ಬೇಗ ಮುಗಿಸಬೇಕು ಎಂಬ ನಿರೀಕ್ಷೆ ಯಲ್ಲಿ ಪ್ರತಿ ನಿತ್ಯ ಸಂಜೆ ಕರಸೇವೆ, ಆದಿತ್ಯವಾರದಂದು ಬೆಳಿಗ್ಗೆ ನಿಂದಲೇ ಕರಸೇವೆ ನಡೆಯುತ್ತಿದೆ.
ಭಕ್ತಾದಿಗಳ ತನು ಮನ ಧನ ಸಹಾಯ ನಿರೀಕ್ಷೆಗಳ ಜೊತೆ ಜೊತೆಗೆ ಇದೀಗ ಭಕ್ತಾದಿಗಳ ಸಹಕಾರದಲ್ಲಿ ವೇಗವಾಗಿ ಜೀರ್ಣೋದ್ಧಾರಗೊಳ್ಳುತ್ತಾ ಭಕ್ತಾದಿಗಳ ನಂಬಿಕೆಯ ಕಾರಣಿಕ ಕ್ಷೇತ್ರ ಬೆಳಗಲಿದೆ.

news-details