ನಗರದ ಬೊಂದೆಲ್‌ನಲ್ಲಿರುವ ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸಿ÷್ಟಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎA) ಇತ್ತೀಚೆಗೆ ನಡೆಸಿದ 3ನೇ ಸುತ್ತಿನ ಮರು-ಮಾನ್ಯತೆ ಪ್ರಕ್ರೀಯೆಯಲ್ಲಿ ನ್ಯಾಷನಲ್ ಅಸೆಸ್‌ಮೆಂಟ್ ಮತ್ತು ಅಕ್ರೆಡಿಟೇಶನ್ ಕೌನ್ಸಿಲ್ (ನ್ಯಾಕ್) ನಿಂದ ‘ಎ' ಗ್ರೇಡ್ ಪಡೆದಿದೆ.
ಮೌಲ್ಯಮಾಪನ ತಂಡದಲ್ಲಿ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಸುನಿಲ್ ಗುಪ್ತಾ; ಮೋಹನ್ ಲಾಲ್ ಸುಖದಿಯಾ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಹನುಮಾನ್ ಪ್ರಸಾದ್, ಮತ್ತು ಲೋನಾವಾಲಾದ ಸಿನ್ಹಗಡ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಕ್ಯಾಟರಿಂಗ್ ಟೆಕ್ನಾಲಜಿಯ ಪ್ರಾಂಶುಪಾಲೆ ಡಾ. ಆಯೇಷಾ ಸಿದ್ದಿಕಿ ಅವರಿದ್ದರು.
ನ್ಯಾಕ್ ಸಮಿತಿಯು ಪಠ್ಯಕ್ರಮ, ಅಧ್ಯಾಪನ, ಕಲಿಕೆ ಮತ್ತು ಮೌಲ್ಯಮಾಪನ, ಸಂಶೋಧನೆ, ಸಲಹೆ ಮತ್ತು ವಿಸ್ತರಣೆ, ಮೂಲಸೌಕರ್ಯ ಮತ್ತು ಕಲಿಕಾ ಸಂಪನ್ಮೂಲಗಳು, ವಿದ್ಯಾರ್ಥಿ ಬೆಂಬಲ ಹಾಗೂ ಪ್ರಗತಿ, ಆಡಳಿತ, ನಾಯಕತ್ವ ಮತ್ತು ನಿರ್ವಹಣೆ, ಮತ್ತು ನಾವೀನ್ಯತೆ, ಅತ್ಯುತ್ತಮ ಅಭ್ಯಾಸಗಳು ಸೇರಿದಂತೆ ಎಲ್ಲಾ ಏಳು ಗುಣಾತ್ಮಕ ಮಾನದಂಡಗಳಲ್ಲಿ ಸಂಸ್ಥೆಯ ಯಶಸ್ಸನ್ನು ಮೆಚ್ಚಿ ಪ್ರಶಂಸಿಸಿದೆ. “ಎಲ್ಲ ಶಿಕ್ಷಣ ಕ್ಷೇತ್ರಗಳಲ್ಲಿ ತನ್ನ ಅತ್ಯುತ್ತಮ ಶಿಕ್ಷಣ ಮಟ್ಟವನ್ನು ಕಾಯ್ದುಕೊಳ್ಳಲು ಎಂಎಸ್‌ಎನ್‌ಐಎA ಬದ್ಧವಾಗಿದೆ ಎಂಬುದನ್ನು ನ್ಯಾಕ್ ಮರುಮಾನ್ಯ ಮಾಡಿ ‘ಎ' ಗ್ರೇಡ್ ನೀಡಿ ಪುನರುಚ್ಚರಿಸಿದೆ ಎಂದು ನಾವು ಹೆಮ್ಮೆಪಡುತ್ತೇವೆ," ಎಂದು ಸಂಸ್ಥೆಯ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧುರಿ ಹೇಳಿದರು.
ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ನಿಂದ ಅನುಮೋದಿಸಲ್ಪಟ್ಟ ಎಂಎಸ್‌ಎನ್‌ಐಎA 1999 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತವಾದ ಮೊದಲ ಎಂಬಿಎ ಸಂಸ್ಥೆಯಾಗಿದೆ. ಈಗ ರಜತ ಮಹೋತ್ಸವದ ವರ್ಷದಲ್ಲಿರುವ ಈ ಸಂಸ್ಥೆಯು 3.6-ಎಕರೆ ವಿಸ್ತಾರವಾದ ಹಸಿರು ಕ್ಯಾಂಪಸ್‌ನಲ್ಲಿ ನೆಲೆಗೊಂಡಿದೆ. ಇದು ಸತತವಾಗಿ 100ಶೇ. ಫಲಿತಾಂಶವನ್ನು ನಿರಂತರವಾಗಿ ಸಾಧಿಸುತ್ತಿದೆ ಮತ್ತು ಹಾಗೂ ಮಂಗಳೂರು ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಅನೇಕ ರ‍್ಯಾಂಕ್ ವಿಜೇತರನ್ನು ನೀಡಿದೆ. ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಭಾರತದೆಲ್ಲೆಡೆ ಖಾಸಗಿ ಮತ್ತು ಸಾರ್ವಜನಿಕ ವಲಯದ ಪ್ರಮುಖ ಕಂಪನಿಗಳಲ್ಲಿ ಉತ್ತಮ ಸ್ಥಾನಗಳನ್ನು ಹೊಂದಿದ್ದಾರೆ.