ಫೆಂಗಲ್ ಚಂಡಮಾರುತ ಪ್ರಭಾವ :ಕರಾವಳಿಯಲ್ಲಿ ಸೋಮವಾರ ದಿಂದ ಎರಡು ದಿನ ಮಳೆ ಬರುವ ಸಾಧ್ಯತೆ?

ಮಂಗಳೂರು

news-details

ಹವಾಮಾನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಹಗಲು ಹೊತ್ತಿನಲ್ಲಿ ಮೋಡ ಬರಲು ಆರಂಭವಾಗಿದ್ದು ರಾತ್ರಿಯೂ ಮೋಡದ ವಾತಾವರಣ ಮುಂದುವರಿಯಬಹುದು. ದ.ಕ ಉ.ಕ ಉಡುಪಿ ಜಿಲ್ಲೆಗಳ ಘಟ್ಟಪ್ರದೇಶಗಳ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಚಂಡಮಾರುತ ನಿಧಾನವಾಗಿ ಚಲಿಸುತ್ತಿರುವ ಕಾರಣ ಸೋಮವಾರ ರಾತ್ರಿ ಕರಾವಳಿ ಜಿಲ್ಲೆಗಳ ಹೆಚ್ಚಿನ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಫೆಂಗಲ್ ಚಂಡಮಾರುತವು ನಿಧಾನವಾಗಿ ಚಲಿಸುತ್ತಿರುವ ಕಾರಣ ಭೂ ಪ್ರವೇಶಿಸಿ ತಮಿಳುನಾಡು - ಕರ್ನಾಟಕ ಗಡಿಪ್ರದೇಶಗಳಲ್ಲಿ ಚಲಿಸಿ ಡಿ. 2ಕ್ಕೆ ಕಣ್ಣೂರು - ಕಾಸರಗೋಡು ನಡುವೆ ಅರಬ್ಬೀಸಮುದ್ರದಲ್ಲಿ ಮುಂದುವರೆಯುವ ಸಾಧ್ಯತೆಗಳಿವೆ. ದಕ್ಷಿಣ ಒಳನಾಡು ಜಿಲ್ಲೆಗಳು ಮಲೆನಾಡು ಕರಾವಳಿ ಜಿಲ್ಲೆಗಳಲ್ಲಿ ಡಿ 4 ತನಕ ಮಳೆ ಮುನ್ಸೂಚನೆ ಇದೆ.

news-details