ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ, ಶಾಲಾ ಕಾಲೇಜು ಗಳಿಗೆ ರಜೆ ಘೋಷಣೆ

ಮಂಗಳೂರು

news-details

ಮಂಗಳೂರು ಫೆಂಗಲ್ ಚಂಡ ಮಾರುತದ ಆರ್ಭಟ ಜೋರಾಗಿದ್ದು ಮುಂಜಾಗೃತಾ ಕ್ರzಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಕ್ರಮ ಕೈಗೊಂಡಿದೆ .ಜಿಲ್ಲೆಯಲ್ಲಿರು ವ ಎಲ್ಲಾ ಅಂಗನವಾಡಿ ,ಸರ್ಕಾರಿ ಅನುದಾನಿತ ಮತ್ತು ಪ್ರಾಥಮಿಕ ,ಪ್ರೌಢಶಾಲೆ ,ಪದವಿ ಪೂರ್ವ ಕಾಲೇಜು ಪಿಯು ಸಿ ವರೆಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.
ಭಾರೀ ಮಳೆಯಿಂದಾಗಿ ನಗರದ ಕೊಟ್ಟಾರ ಚೌಕಿ ಸೇರಿದಂತೆ ವಿವಿದೆಡೆ ಕೃತಕ ನೆರೆ ಉಂಟಾಯಿತು. ವಾಹನ ಸವಾರರು ತೊಂದರೆ ಅನುಭವಿಸಿದರು.
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರಿಗೆ ಸೂಕ್ತವಾಗಿ ಸ್ಪಂದಿಸುವಂತೆ ಜಿಲ್ಲಾಧಿಕಾರಿ ಅದೇಶಿದ್ದಾರೆ.

news-details