ಮಂಗಳೂರಿನ ಫಸ್ಟ್ ನ್ಯೂರೋ ಬ್ರೈನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ "ಬೆಸ್ಟ್ ಸ್ಟ್ರೋಕ್ ರೆಡಿ ಹಾಸ್ಪಿಟಲ್ ಆಫ್ ದಿ ಇಯರ್" " ಪ್ರಶಸ್ತಿ

ಮಂಗಳೂರು

news-details

ಮಂಗಳೂರಿನ ಫಸ್ಟ್ ನ್ಯೂರೋ ಬ್ರೈನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಐಎಸ್‌ಎ (ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್) ಸಹಯೋಗದೊಂದಿಗೆ ವಿಒಹೆಚ್ (ವಾಯ್ಸ್ಆಫ್ ಹೆಲ್ತ್ಕೇರ್) ನೀಡುವ "ಬೆಸ್ಟ್ ಸ್ಟ್ರೋಕ್ ರೆಡಿ ಹಾಸ್ಪಿಟಲ್ ಆಫ್ ದಿ ಇಯರ್" ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಕೀರ್ತಿಯನ್ನು ಗಳಿಸಿದೆ. ಈ ಗೌರವವು ಆಸ್ಪತ್ರೆಯ ಸ್ಟ್ರೋಕ್ ಆರೈಕೆಯಲ್ಲಿನ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಯ ಪ್ರತಿಬಿಂಬವಾಗಿದೆ ಮತ್ತು ರೋಗಿಗಳ ಆರೋಗ್ಯವನ್ನು ಸುಧಾರಿಸಲು ಸದಾ ಪ್ರಯತ್ನಿಸುತ್ತಿರುವದೃಢನಿಷ್ಠೆಯನ್ನು ಗುರುತಿಸಿದೆ.

ಫಸ್ಟ್ ನ್ಯೂರೋ ಬ್ರೈನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ತ್ವರಿತ ಪ್ರತಿಕ್ರಿಯೆ, ಅತ್ಯಾಧುನಿಕಚಿಕಿತ್ಸೆ ಮತ್ತು ರೋಗಿಗಳ ಆರೈಕೆಯಲ್ಲಿ ಗಣನೀಯ ಕೊಡುಗೆ ನೀಡಿದ್ದಕ್ಕಾಗಿ ಈ ಪ್ರಶಸ್ತಿಯನ್ನು ಪಡೆದಿದೆ. ಈ ಮಾನ್ಯತೆಯು ಇನ್ನೂ ಹೆಚ್ಚಿನಗುಣಮಟ್ಟದ ಸ್ಟ್ರೋಕ್ ಆರೈಕೆ ಸೇವೆಗಳನ್ನು ರೋಗಿಗಳಿಗೆ ಒದಗಿಸುವಲ್ಲಿ ಆಸ್ಪತ್ರೆಯ ಜವಾಬ್ದಾರಿಯನ್ನು ಹೆಚ್ಚಿಸಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನವೆಂಬರ್ ೩೦, ೨೦೨೪ರಂದು ನವದೆಹಲಿಯ ಹಯತ್‌ರೀಜೆನ್ಸಿಯಲ್ಲಿ ನಡೆದ ಸಮಾರಂಭದಲ್ಲಿ ಬಿಸಿನೆಸ್ ಡೆವಲಪ್ಮೆಂಟ್‌ನ ಮುಖ್ಯಸ್ಥರಾದ ಶ್ರೀ ಪ್ರತ್ಯೂಷ್ ಶೆಟ್ಟಿಯವರುಸ್ವೀಕರಿಸಿದರು.

"ಬೆಸ್ಟ್ ಸ್ಟ್ರೋಕ್ ರೆಡಿ ಹಾಸ್ಪಿಟಲ್ ಆಫ್ ದಿ ಇಯರ್" ಪ್ರಶಸ್ತಿ ಲಭಿಸಿದ್ದು ನಮಗೆ ಅತ್ಯಂತ ಗೌರವ ಮತ್ತು ಹೆಮ್ಮೆಯೆನಿಸುತ್ತಿದೆ ಎಂದು ಫಸ್ಟ್ ನ್ಯೂರೋ ಬ್ರೈನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮ್ಯಾನೇಜಿಂಗ್‌ ಡೈರೆಕ್ಟರ್‌ರಾದ ಡಾ. ರಾಜೇಶ್ ಶೆಟ್ಟಿ ತಿಳಿಸಿದರು. ಈ ಪ್ರಶಸ್ತಿ ನಮ್ಮತಂಡದ ಪ್ರಾಮಾಣಿಕ ಶ್ರಮ ಮತ್ತು ನಿಷ್ಠೆಯನ್ನುತೋರಿಸುತ್ತದೆ. ನಮ್ಮತಂಡ ಸ್ಟ್ರೋಕ್ ರೋಗಿಗಳಿಗೆ ಅತ್ಯುತ್ತಮಆರೈಕೆಯನ್ನುಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ ಮತ್ತು ನಾವು ಸ್ಟ್ರೋಕ್ ಚಿಕಿತ್ಸೆಯನ್ನು ಇನ್ನೂ ಹೆಚ್ಚು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲು ಮತ್ತು ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ಹಾಗೂ ಅದರ ಫಲಿತಾಂಶಗಳನ್ನು ನೀಡಲು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು.

ಸ್ಟ್ರೋಕ್ ಜಾಗತಿಕವಾಗಿ ಶಾರೀರಿಕ ಅಂಗವೈಕಲ್ಯತೆಗೆ ಮತ್ತು ಮರಣಕ್ಕೆ ಪ್ರಮುಖಕಾರಣವಾಗಿದೆ. ಫಸ್ಟ್ ನ್ಯೂರೋ ಬ್ರೈನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಟ್ರೋಕ್ ತಡೆಗಟ್ಟುವಿಕೆ, ಲಕ್ಷಣಗಳು ಮತ್ತು ಚಿಕಿತ್ಸೆಗಳ ಬಗ್ಗೆ ಜಾಗೃತಿ ಮೂಡಿಸಲು ಬದ್ಧವಾಗಿದೆ. ಆಸ್ಪತ್ರೆಯ ಪರಿಣತ ತಜ್ಞರ ತಂಡವು ಸ್ಟ್ರೋಕ್ ರೋಗಿಗಳಿಗೆ ತುರ್ತುಚಿಕಿತ್ಸೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಧಾರಿತ ವಿಧಾನಗಳನ್ನು ಬಳಕೆಯೊಂದಿಗೆ ಚಿಕಿತ್ಸೆ ಮತ್ತು ಸ್ಟ್ರೋಕ್ ಬಾಧಿತರು ಮತ್ತು ಅವರ ಕುಟುಂಬಗಳಿಗೆ ಸದಾ ಮಾನಸಿಕ ಧೈರ್ಯವನ್ನು ನೀಡುತ್ತಿದ್ದಾರೆ.


ಕರಾವಳಿ ನಗರವಾದ ಮಂಗಳೂರಿನಲ್ಲಿ ಫಸ್ಟ್ ನ್ಯೂರೋ ಬ್ರೈನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಮೈಲಿಗಲ್ಲನ್ನು ಸ್ಥಾಪಿಸಿದೆ. ಮೆದುಳು ಮತ್ತು ನರ ಸಂಬಂಧಿಸಿದ ನ್ಯೂರೋಲಾಜಿಕಲ್ ಸಮಸ್ಯೆಗಳು ಅತ್ಯಂತ ಸಂಕೀರ್ಣವಾಗಿದ್ದುಅದರ ಪರನಿರ್ದಿಷ್ಟ ಪರಿಣತತಜ್ಞರತಂಡ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಸೌಕರ್ಯಗಳು ಈ ಆಸ್ಪತ್ರೆಯಲ್ಲಿ ಲಭ್ಯವಿವೆ.

ಪ್ರತಿಷ್ಠಿತ ನ್ಯೂರೋ ಆಸ್ಪತ್ರೆಯಲ್ಲಿರುವ ವೈಶಿಷ್ಟ್ಯತೆಗಳು :

ವಿಶಿಷ್ಟ ಆರೈಕೆ:
ಮೆದುಳು ಮತ್ತು ನರ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಪರಿಣಿತ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯೊಂದಿಗೆ ಈ ಆಸ್ಪತ್ರೆ ನಿರ್ದಿಷ್ಟ ಮತ್ತು ವೈಯಕ್ತಿಕ ಆರೋಗ್ಯ ಆರೈಕೆಯನ್ನು ಒದಗಿಸುತ್ತದೆ. ಇದರಲ್ಲಿ ಮೆದುಳು ಗಡ್ಡೆ, ಬೆನ್ನು ಮೂಳೆ ಗಾಯಗಳು, ಪಾರ್ಶ್ವವಾಯು, ಫಿಡ್ಸ್ ಮುಂತಾದ ರೋಗಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಆಧುನಿಕತಂತ್ರಜ್ಞಾನ:
ನ್ಯೂರೋ ಆಸ್ಪತ್ರೆಗಳು ಶ್ರೇಷ್ಠ ಗುಣಮಟ್ಟದ ವೈದ್ಯಕೀಯ ಉಪಕರಣಗಳು ಮತ್ತು ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುತ್ತವೆ. ಇದರಿಂದ ರೋಗಿಗಳು ನಿಖರವಾದ ವೈದ್ಯಕೀಯಆರೈಕೆಯನ್ನು ಪಡೆಯಲು ಸಾಧ್ಯವಾಗುತ್ತದೆ.

ಸಮಗ್ರ ಸೇವೆಗಳು:
ನ್ಯೂರೋ ಆಸ್ಪತ್ರೆಗಳು ಸಾಮಾನ್ಯವಾಗಿ ನ್ಯೂರೋಸರ್ಜರಿ, ನ್ಯೂರೋಲಾಜಿ, ನ್ಯೂರೋ ಪುನರ್‌ಶ್ಚೇತನ ಮತ್ತು ನೋವು ನಿರ್ವಹಣೆ ಸೇರಿದಂತೆ ವಿಶಾಲ ಶ್ರೇಣಿಯ ಸೇವೆಗಳನ್ನು ನೀಡುತ್ತವೆ. ಈ ಸಂಪೂರ್ಣ ವಿಧಾನವು ರೋಗಿಗಳಿಗೆ ಅತ್ಯುತ್ತಮಆರೋಗ್ಯ ಪರಿಹಾರವನ್ನು ನೀಡುತ್ತದೆ.

ಆರೋಗ್ಯದ ಮಾನದಂಡಗಳನ್ನು ಸುಧಾರಿಸುವುದು:
ಈ ರೀತಿಯ ವೈಶಿಷ್ಟ್ಯಪೂರ್ಣ ಆಸ್ಪತ್ರೆಯ ಪ್ರಸ್ತುತಿಯಿಂದ ಪ್ರಾದೇಶಿಕ ಆರೋಗ್ಯ ಸೇವೆಗಳಲ್ಲಿ ಒಟ್ಟಾರೆಗುಣಮಟ್ಟ ಹೆಚ್ಚಾಗುವ ಸಂಭವವಿದೆ. ಇದುಇತರ ವೈದ್ಯಕೀಯ ಸೌಲಭ್ಯಗಳನ್ನು ತನ್ನ ಸೇವೆಗಳನ್ನು ಸುಧಾರಿಸಲು ಪ್ರೇರೇಪಿಸಬಹುದು.

ರೋಗಿಗಳ ಅನುಕೂಲತೆ:
ಎಲ್ಲಾ ಅನುಕೂಲಗಳಿರುವ ಇಂತಹ ಆಸ್ಪತ್ರೆಯಲ್ಲಿ ರೋಗಿಗಳಿಗೆ ಒಂದೇ ಸ್ಥಳದಲ್ಲಿ ಚಿಕಿತ್ಸೆಯನ್ನು ಪಡೆಯಲು ಅನುಕೂಲವಾಗುತ್ತದೆ. ಇದು ಆರೋಗ್ಯ ಸೇವೆಯನ್ನು ಸುಲಭವಾಗಿಸುತ್ತದೆ ಮತ್ತು ಕಡಿಮೆ ಒತ್ತಡಮಯವಾಗುತ್ತದೆ.

ಸಾರಾಂಶವಾಗಿ "ಫಸ್ಟ್ ನ್ಯೂರೋ ಬ್ರೈನ್ ಮತ್ತು ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ" ಈ ಮೇಲೆ ತಿಳಿಸಿದ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು ಮಂಗಳೂರಿನಲ್ಲಿ ಅವಶ್ಯ ಆರೋಗ್ಯ ಸೇವೆಯನ್ನು ವಿಶೇಷವಾಗಿ ನ್ಯೂರೋಸೈನ್ಸ್ ಕ್ಷೇತ್ರದಲ್ಲಿ ಸುಧಾರಿಸಲು ಮಹತ್ವದ ಕೊಡುಗೆಯನ್ನು ನೀಡುತ್ತಿದೆ. ಈ ಆಸ್ಪತ್ರೆಯು ಮಂಗಳೂರು ನಗರದಲ್ಲಿ ಕ್ಯೂಎಐ (ಕ್ವಾಲಿಟಿ ಅಂಡ್‌ ಅಕ್ರಿಡಿಟೇಶನ್ ಇನ್‌ಸ್ಟಿಟ್ಯೂಟ್) ಮನ್ನಣೆ ಹೊಂದಿದ ಏಕೈಕ ಸ್ಟ್ರೋಕ್ ಕೇಂದ್ರವಾಗಿದೆ. ಇದು ರೋಗಿಗಳ ಉತ್ತಮಆರೈಕೆಯನ್ನು ನೀಡಲು, ವೈದ್ಯಕೀಯ ಜ್ಞಾನವನ್ನು ಆಧುನಿಕರಿಸಲು ಮತ್ತು ನ್ಯೂರೋಲಾಜಿಕಲ್ ಸಮಸ್ಯೆಗಳಿಗೆ ವಿಶೇಷ ಚಿಕಿತ್ಸೆಯನ್ನು ನೀಡಲು ಬದ್ಧತೆಯನ್ನು ಪ್ರತಿನಿಧಿಸುತ್ತದೆ ಮತ್ತು ಇದರಿಂದ ಅರ್ಹ ರೋಗಿಗಳಿಗೆ ಅವಶ್ಯಕ ಚಿಕಿತ್ಸೆಯು ಲಭಿಸುತ್ತದೆ.

news-details