ಪುತ್ತೂರು ತಾಲೂಕಿನ ಕಾವುಮಾಡ್ನೂರು ಗ್ರಾಮದ ಚಾಕೋಟೆ ಪರಿಸರದಲ್ಲಿ ರಾತ್ರಿ ಕೃಷಿಕರ ಅಡಿಕೆ ತೆಂಗು ತೋಟಕ್ಕೆ ನುಗ್ಗಿದ ಕಾಡಾನೆಗಳು ಅಡಿಕೆ ಗಿಡ ತೆಂಗಿನ ಮರ ಬಾಳೆ ಗಿಡ ಸೇರಿದಂತೆ ಹಲವಾರು ಮರಗಳನ್ನು ನಾಶ ಮಾಡಿ ಕೃಷಿಕರಿಗೆ ಅಪಾರ ನಷ್ಟವನ್ನುಂಟು ಮಾಡಿರುವ ತೋಟಗಳಿಗೆ ಕಾವು ಪುತ್ತಿಲ ಪರಿವಾರ ಸಮಿತಿಯ ಸದಸ್ಯರು ಭೇಟಿ ನೀಡಿದರು.
ಕೃಷಿ ಹಾನಿ ಸಂಭವಿಸಿದ ರೈತರ ತೋಟ ಗಳಿಗೆ ತೆರಳಿ ಪರಿಶೀಲನೆ ನಡೆಸಿ ಮನೆಯವರಿಗೆ ಸಾಂತ್ವನವನ್ನು ಹೇಳಿದರು.
ಪುತ್ತಿಲ ಪರಿವಾರದ ಮುಖಾಂತರ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಮಾತನಾಡಿಸಿ ಆನೆಗಳನ್ನು ಪುನ: ಕಾಡಿಗೆ ಓಡಿಸಲು ಒತ್ತಾಯ ಮಾಡಲಾಯಿತು. ಹಾಗೆ ಕೃಷಿಯಲ್ಲಿ ಅಪಾರ ನಷ್ಟವನ್ನು ಅನುಭವಿಸಿದ ಕೃಷಿಕರಿಗೆ ಸರಕಾರದ ಪರಿಹಾರ ಧನವನ್ನು ತಕ್ಷಣ ನೀಡಬೇಕೆಂದು ಒತ್ತಾಯಿಸಿದರು.ಮಾಡ್ನೂರು,
ಅರಿಯಡ್ಕ,ಬಡಗನ್ನೂರು, ಪಡುವನೂರು, ನೆಟ್ಟಣಿಗೆ ಮೂಡ್ನೂರು ಗ್ರಾಮಗಳಲ್ಲಿ ಕಾಡುಕೋಣ,ಕಾಡು ಎಮ್ಮೆಗಳ ವಿಪರೀತ ಹಾವಳಿ ಇದ್ದು ಇವುಗಳನ್ನು ಕೂಡ ರಕ್ಷಿತಾರಣ್ಯದ ಕಡೆಗೆ ಓಡಿಸಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ರೈತರ ಕೃಷಿಯ ಭದ್ರತೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ