ಡಿಸೆಂಬರ್7,8 :ಬೆಳ್ಳಿಚಡವು ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಶಾರದಂಬ ಭಜನಾ ಮಂದಿರ ಮತ್ತು ನಾಗ ಸಾನಿಧ್ಯದ ದ್ವಿತೀಯ ವರ್ಷದ ಪ್ರತಿಷ್ಠ ವಾರ್ಷಿಕೋತ್ಸವ ಹಾಗೂ ಅಯ್ಯಪ್ಪ ದೀಪೋತ್ಸವ

ಪುತ್ತೂರು

news-details

ಬೆಳ್ಳಿಚಡವು ಶ್ರೀ ಅಯ್ಯಪ್ಪ ಸೇವಾ ಸಮಿತಿ ನೇತೃತ್ವದಲ್ಲಿ
ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳು ಮತ್ತು ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಗಳು ಇವರ ಮಾರ್ಗದರ್ಶನದಲ್ಲಿ ಬೆಳ್ಳಿಚಡವು ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಶಾರದಾಂಬ ಭಜನಾ ಮಂದಿರ ಮತ್ತು ನಾಗ ಸಾನಿಧ್ಯದ ದ್ವಿತೀಯ ವರ್ಷದ ಪ್ರತಿಷ್ಠ ವಾರ್ಷಿಕೋತ್ಸವ ಹಾಗೂ ಅಯ್ಯಪ್ಪ ದೀಪೋತ್ಸವವು ಡಿ. 7,8ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಡಿ. 7 ರಂದು ಬೆಳಿಗ್ಗೆ ದೀಪಾರಾಧನೆ, ಶರಣು ಘೋಷ,ಗಣಪತಿ ಹವನ, ನಂತರ ಶ್ರೀ ಅಯ್ಯಪ್ಪ ಮತ್ತು ಶ್ರೀ ಶಾರದಾಂಬ ಭಜನಾ ಮಂಡಳಿ ಬೆಳ್ಳಿ ಚಡವು, ಮಾರಿಯಮ್ಮ ಭಜನಾ ತಂಡ ಜಲಧರ ಕಾಲೋನಿ ಮೇನಾಲ, ಶ್ರೀರಾಮ ಭಜನಾ ಮಂಡಳಿ ದೇಲಂಪಾಡಿ,ಶ್ರೀ ಮೂಕಾಂಬಿಕಾ ಭಜನಾ ಮಂಡಳಿ ಭೈರವ ಗುಡ್ಡೆ, ಶ್ರೀ ಮಹಾಮಾಯಿ ಭಜನಾ ಸಂಘ ಈಶ್ವರಮಂಗಲ , ಶ್ರೀ ಅಯ್ಯಪ್ಪ ಭಜನಾ ಸಂಘ ಶಕ್ತಿ ನಗರ ಗಾಳಿಮುಖ, ಶ್ರೀ ಪಂಚಲಿಂಗೇಶ್ವರ ಭಜನಾ ಸಂಘ ಈಶ್ವರಮಂಗಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ,ಅನ್ನ ಸಂತರ್ಪಣೆ ನಡೆಯಲಿದೆ ನಂತರ ಭಜನಾ ಕಾರ್ಯಕ್ರಮ ಮುಂದುವರಿಯಲಿದೆ.
ಸಂಜೆ ಶರಣು ಘೋಷ ನಂತರ ಉಲ್ಪೆ ಮೆರವಣಿಗೆ ಯು ಗ್ರಾಮಾಧಿಪತಿ ಶ್ರೀ ಪಂಚಲಿಂಗೇಶ್ವರ ದೇವರ ಸಾನಿಧ್ಯದಿಂದ ಶರಣಘೋಷ, ಚೆಂಡೆ, ತಾಳ,ನೂರಾರು ನೃತ್ಯಭಜಕರ ಭಜನೆ ಯೊಂದಿಗೆ ಬೆಳ್ಳಿ ಚಡವು ಭಜನಾ ಮಂದಿರಕ್ಕೆ ಆಗಮಿಸಲಿದೆ. ಶ್ರೀ ಪಂಚಲಿಂಗೇಶ್ವರ ಕುಣಿತ ಭಜನಾ ಸಂಘ ಈಶ್ವರಮಂಗಲ ಮತ್ತು ಶ್ರೀ ರಾಮಾಂಜನೇಯ ಭಜನಾ ತಂಡ ಹನುಮಗಿರಿ ಈಶ್ವರ ಮಂಗಲ ಮೆರವಣಿಗೆ ಯಲ್ಲಿ ಭಾಗವಹಿಸಲಿವೆ.
ರಾತ್ರಿ ಮಹಾಪೂಜೆ,ಪ್ರಸಾದವಿತರಣೆ ಅನ್ನಸಂರ್ಪಣೆ ನಡೆಯಲಿದೆ. ಶ್ರೀಮತಿ ತೇಜಸ್ವಿನಿನವೀನ್ ಕುಕ್ಕುಡೇಲು ಇವರ ನಿರ್ದೇಶನದಲ್ಲಿ ಸಮರ್ಥ ಸಾಂಸ್ಕೃತಿಕ ತಂಡದವರಿಂದ ನೃತ್ಯ ಗಾನ ವೈಭವ ನಡೆಯಲಿದೆ.
ಡಿ. 8ರಂದು ಬೆಳಿಗ್ಗೆ ದೀಪಾರಾಧನೆ, ಶರಣು ಘೋಷ, ನಾಗತಂಬಿಲ,ಪ್ರಕಾಶ್ ಆಚಾರ್ಯ ಮತ್ತು ಬಳಗ, ಸಪ್ತಸ್ವರ ಸಂಗೀತ ಶಾಲೆ ಈಶ್ವರ ಮಂಗಲ ಇವರಿಂದ ಭಜನೆ, ಈಶ್ವರ ಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ರವೀಂದ್ರ ಮಾಣಿಲತ್ತಾಯ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಮಹಾಪೂಜೆ,ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ. ನಂತರ ಶ್ರೀ ರಾಮಣ್ಣ ನಾಯ್ಕ ಬಸಿರಡ್ಕ
ದೇಲಂಪಾಡಿ ಇವರ ಪ್ರಾಯೋಜಕತ್ವದಲ್ಲಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಹಿಳಾ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ ಶ್ರೀ ಕೋದಂಡರಾಮ ಅಮರಗಿರಿ ಮಕ್ಕಳ ಕುಣಿತ ಭಜನಾ ತಂಡ ಈಶ್ವರಮಂಗಲ,ಶ್ರೀರಾಮ ಕುಣಿತ ಭಜನಾ ತಂಡ ದೇಲಂಪಾಡಿ, ಅಂಬಾಭವಾನಿ ಭಜನಾ ಸಂಘ ಪಾದೇಗದ್ದೆ, ನೆಟ್ಟಣಿಗೆ, ಸರ್ವೋದಯ ಪ್ರೌಢಶಾಲಾ ಕುಣಿತ ಭಜನಾ ಸಂಘ ಸುಳ್ಯ ಪದವು ಗಳಿಂದ ಕುಣಿತ ಭಜನೆ ನಡೆಯಲಿದೆ.ನಂತರ ಮಹಾಪೂಜೆ,ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ ವರ್ಣಂ ಡ್ಯಾನ್ಸ್ ಸ್ಟುಡಿಯೋ ಈಶ್ವರ ಮಂಗಲ ಇವರಿಂದ ನೃತ್ಯ ವೈಭವ ನಡೆಯಲಿದೆ. ಎಂದು ಪ್ರಕಟಣೆ ತಿಳಿಸಿದೆ.

news-details