ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ-ಚಂದ್ರ ಮಂಡಲ ಉತ್ಸವ

ಮಂಗಳೂರು

news-details

ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಕ್ಷೇತ್ರದಲ್ಲಿ ಡಿ.7ರ ಶನಿವಾರ ಮಧ್ಯಾಹ್ನ ಷಷ್ಠಿ ಮಹೋತ್ಸವ -ಚಂದ್ರ ಮಂಡಲ ಉತ್ಸವ, ನಡೆಯಿತು.
ಕ್ಷೇತ್ರದ ಪ್ರಧಾನ ತಂತ್ರಿಗಳಾದ ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮಾ, ಪ್ರಧಾನ ಆಚಾರ್ಯರ ಪ್ರಧಾನ ಆಚಾರ್ಯತ್ವದಲ್ಲಿ ಶ್ರೀ ಕಾಳಿಕಾಂಬಾ ಮತ್ತು ಶ್ರೀ ಸುಬ್ರಮಣ್ಯ ದೇವರ ಬಲಿ ಉತ್ಸವ ನಡೆಯಿತು. ಕ್ಷೇತ್ರದ ಪ್ರಧಾನ ಅರ್ಚಕರಾದ
ಧನಂಜಯ ಪುರೋಹಿತರು ಮತ್ತು ವಿಘ್ನೇಶ್ ಪುರೋಹಿತರು ಮತ್ತು ಇತರ ಪುರೋಹಿತರು ಸಹಕರಿಸಿದರು.
ಕ್ಷೇತ್ರದ ಆಡಳಿತಾಧಿಕಾರಿಗಳಾದ ಕೆ. ಉಮೇಶ್ ಆಚಾರ್ಯ ಪಾಂಡೇಶ್ವರ, ಕ್ಷೇತ್ರದ ಮಾಜಿ ಮೊಕ್ತೇಸರರು, ಮಾಜಿ ಆಡಳಿತ ಮಂಡಳಿ ಸದಸ್ಯರು, ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಸದಸ್ಯರು ಸಂಘ ಸಂಸ್ಥೆಗಳ ಸದಸ್ಯರು, ಭಕ್ತಾಧಿಗಳು ಭಾಗವಹಿಸಿದರು.

news-details